ದಕ್ಷಿಣ ಕನ್ನಡ ಜಿಲ್ಲಾ ಕಿರಿಯರ ಒಲಿಂಪಿಕ್ಸ್ ಉದ್ಘಾಟನೆ

Update: 2016-01-15 19:05 GMT

ಮಂಗಳೂರು, ಜ.15: ನಗರದ ಕ್ರೀಡಾಭಾರತಿ, ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಮಂಗಳಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ದ.ಕ.ಜಿಲ್ಲಾ ಕಿರಿಯರ ಒಲಿಂಪಿಕ್ಸ್‌ಗೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಗ್ರಾಮೀಣ ಭಾಗದ ಎಳೆಯ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸುವ ಮೂಲಕ ವಿಶ್ವ ಒಲಿಂಪಿಕ್ಸ್‌ನಲ್ಲೂ ನಮ್ಮ ಕ್ರೀಡಾಳುಗಳು ಭಾಗವಹಿಸಬೇಕು ಎಂಬ ನೆಲೆಯಲ್ಲಿ ಕ್ರೀಡಾಭಾರತಿ ನಡೆಸುವ ಕಿರಿಯರ ಒಲಿಂಪಿಕ್ಸ್ ಅತ್ಯಂತ ಅರ್ಥಪೂರ್ಣವಾದುದು ಎಂದು ಅವರು ಈ ಸಂದರ್ಭ ಅಭಿಪ್ರಾಯಿಸಿದರು. ಅಧ್ಯಕ್ಷತೆಯನ್ನು ಶಾಸಕ ಜೆ.ಆರ್.ಲೋಬೊ ವಹಿಸಿದ್ದರು. ಮಾಜಿ ಸಂಸದೆ ತೇಜಸ್ವಿನಿ ಗೌಡ ಉಪಸ್ಥಿತರಿದ್ದರು. ಇದೇ ಸಂದರ್ಭ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯಿಂದ ಪ್ರಶಸ್ತಿ ಪಡೆದ ಕ್ರೀಡಾ ಸಂಘಟಕ ಎ.ಸದಾನಂದ ಶೆಟ್ಟಿ, ಅಂತಾರಾಷ್ಟ್ರೀಯ ಕ್ರೀಡಾ ಸಾಧಕ ಡಿ.ಪದ್ಮನಾಭ ಕುಮಾರ್ ಮೊದಲಾದ ಸಾಧಕರನ್ನು ಸನ್ಮಾನಿಸಲಾಯಿತು. ಸಂಸದ ನಳಿನ್‌ಕುಮಾರ್ ಕಟೀಲ್, ಡಿಡಿಪಿಐ ವಾಲ್ಟರ್ ಡಿಮೆಲ್ಲೊರನ್ನು ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಅಂತಾರಾಷ್ಟ್ರೀಯ ಕ್ರೀಡಾಪಟು ಶ್ರೀಧರ ಆಳ್ವ, ಕಸಾಪ ಮಾಜಿ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಕ್ರೀಡಾಭಾರತಿ ಪ್ರಾಂತ ಸಂಯೋಜಕ ವಿ.ಮಂಜುನಾಥ್, ಎಂಆರ್‌ಪಿಎಲ್ ನಿರ್ದೇಶಕ ಎಚ್.ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕೇಶವ, ಯುವಜನ ಕ್ರೀಡಾ ಇಲಾಖೆಯ ಪಾಂಡುರಂಗ ಗೌಡ, ಡಿಡಿಪಿಐ ವಾಲ್ಟರ್ ಡಿಮೆಲ್ಲೊ, ಕಾರ್ಪೊರೇಟರ್ ಜಯಂತಿ ಆಚಾರ್, ಪಾಲಿಕೆ ವಿಪಕ್ಷ ನಾಯಕ ಸುೀರ್ ಶೆಟ್ಟಿ ಕಣ್ಣೂರು, ಆರೆಸ್ಸೆಸ್ ಪ್ರಾಂತ ಸಂಘಚಾಲಕ ಡಾ.ವಾಮನ ಶೆಣೈ, ಮಹಾನಗರ ಸಂಘಚಾಲಕ್ ಡಾ.ಸತೀಶ್ ರಾವ್, ಎಚ್‌ಎಂಎಸ್‌ನ ಸುರೇಶ್ಚಂದ್ರ ಶೆಟಿ,್ಟ ಉದ್ಯಮಿ ಪ್ರಕಾಶ್ ಶೆಟ್ಟಿ, ಉದಯ ಚೌಟ ಉಪಸ್ಥಿತರಿದ್ದರು. ಕ್ರೀಡಾ ಭಾರತಿಯ ಗೌರವಾಧ್ಯಕ್ಷ ಬಿ.ನಾಗರಾಜ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾಭಾರತಿ ಅಧ್ಯಕ್ಷ ಕೆ.ಚಂದ್ರಶೇಖರ ರೈ ಸ್ವಾಗತಿಸಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ನಾಯಕ್ ವಂದಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News