ಮಂಗಳೂರು ವಿವಿ: ಆಳ್ವಾಸ್‌ಗೆ 31 ರ್ಯಾಂಕ್
ಮೂಡುಬಿದಿರೆ, ಜ.15: ಮಂಗಳೂರು ವಿವಿಗೆ ಸಂಯೋಜನೆಗೊಂಡು ಮಾದರಿಯಾಗಿ ಕಾರ್ಯಾಚರಿಸುತ್ತಿರುವ ಆಳ್ವಾಸ್ ಪದವಿ, ಸ್ನಾತಕೋತ್ತರ ದೈಹಿಕ ಶಿಕ್ಷಣ ಕಾಲೇಜು ಮತ್ತು ಆಳ್ವಾಸ್ ಶಿಕ್ಷಣ ತರಬೇತಿ ಕಾಲೇಜು ಈ ಬಾರಿಯು ವಿವಿ ಮಟ್ಟದಲ್ಲಿ ಈ ಬಾರಿ ಅತೀ ಹೆಚ್ಚು 31 ರ್ಯಾಂಕುಗಳನ್ನು ಗಳಿಸಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವ ಶುಕ್ರವಾರ ತಿಳಿಸಿದ್ದಾರೆ. ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿವಿಗೆ ಮಾದರಿಯಾಗಿ ಸತತ ಹತ್ತು ವರ್ಷಗಳಿಂದ ಆಳ್ವಾಸ್ ಸಂಸ್ಥೆಯು ಸಮಗ್ರ ಪ್ರಶಸ್ತಿಗಳನ್ನು ಪಡೆಯುತ್ತಾ ಬಂದಿದ್ದು, ತನ್ನ ಸಾಧನೆಯಿಂದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶಗಳನ್ನು ನೀಡುತ್ತಿದೆ. ಪ್ರತೀ ವರ್ಷ 300ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದಲೇ ವಿವಿಧ ಕಂಪೆನಿಗಳಿಗೆ ಆಯ್ಕೆಯಾಗಿದ್ದಾರೆ. 150 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಗಳಲ್ಲಿ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡಿದೆ ಎಂದರು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುರಿಯನ್ ಮತ್ತು ಮಾಧ್ಯಮ ಸಂಪರ್ಕಾಕಾರಿ ಪದ್ಮನಾಭ ಶೆಣೈ ಸುದ್ದಿಗೋಷ್ಠಿಯಲ್ಲಿ ಈ ಸಂದರ್ಭ ಉಪಸ್ಥಿತರಿದ್ದರು. ಪಿಜಿ ರ್ಯಾಂಕ್ : 1. ರಿತಿಕಾ ಎಂಡಿ 3ನೆ ರ್ಯಾಂಕ್ (ಎಂಎಸ್‌ಡಬ್ಲ್ಯೂ), 2. ಪ್ರಜ್ಞಾ ಸಿ.ಶೆಟ್ಟಿ 8ನೆ ರ್ಯಾಂಕ್ (ಎಂ.ಕಾಂ), 3. ಹರ್ಷಿತಾ ಎಚ್.ಜಿ 1ನೆ ರ್ಯಾಂಕ್ (ಎಂಎಚ್‌ಆರ್‌ಡಿ), 4.ದಿವ್ಯಾ ಪ್ರಭಾಕರ್ ಭಟ್ 2ನೆ ರ್ಯಾಂಕ್ (ಎಂಎಚ್‌ಆರ್‌ಡಿ), 5. ಸುರಕ್ಷಾ 3ನೆ ರ್ಯಾಂಕ್ (ಎಂಎಚ್‌ಆರ್‌ಡಿ), 6. ಸಾಲ್ಯಾನ್ ಭವ್ಯಶ್ರೀ ಸುಂದರ್ 1ನೆ ರ್ಯಾಂಕ್ (ಎಂ.ಕಾಂ (ಐಬಿಒ) ), 7. ಸುಶ್ಮಿತಾ ಆರ್. ಶೆಟ್ಟಿ 2ನೆ ರ್ಯಾಂಕ್ (ಎಂ.ಕಾಂ (ಐಬಿಒ) ), 8. ಅನ್ವಿತಾ ಎ.ಜೈನ್ 3ನೆ ರ್ಯಾಂಕ್ (ಎಂ.ಕಾಂ (ಐಬಿಒ)),9. ಕಾವಾ ಕೃಷ್ಣನ್ ಎಂ. 1ನೆ ರ್ಯಾಂಕ್ (ಎಂ.ಎಸ್ಸಿ.ಎನ್.ಚೆಂ), 10. ವಿಜೇತಾ ಎಂ. 2ನೆ ರ್ಯಾಂಕ್ (ಎಂ.ಎಸ್ಸಿ.ಎನ್. ಚೆಂ), 11. ಪಿ್ರಯಾಂಕಾ ಅಪ್ಪಣ್ಣ ಅಪರಾಜ್ 3ನೆ ರ್ಯಾಂಕ್ (ಎಂ.ಎಸ್ಸಿ.ಎನ್.ಚೆಂ), 12.ಗೌತಮಿ ಆರ್. 1ನೆ ರ್ಯಾಂಕ್ ( ಎಂ.ಎಸ್ಸಿ. ಬಯೋಟೆಕ್), 13. ಲಕ್ಷ್ಮೀ ಪರಮೇಶ್ವರ ಗಾಡಿಗ 2ನೆ ರ್ಯಾಂಕ್ (ಎಂ.ಎಸ್ಸಿ. ಬಯೋಟೆಕ್), 14. ಶೆರ್ಲಿ ವಿನೋಲಿಯ ನಝ್ರತ್ 2ನೆ ರ್ಯಾಂಕ್ (ಎಂ.ಎಸ್ಸಿ ಫಿಸಿಕ್ಸ್), 15. ನಳಿನಾಕ್ಷಿ 1ನೆ ರ್ಯಾಂಕ್ (ಕಂಪ್ಯೂಟರ್ ಸೈನ್ಸ್), ಸುರೇಖಾ ಎಸ್‌ಪಿ 3ನೆ ರ್ಯಾಂಕ್ ( ಎಂ.ಎಸ್ಸಿ ಮ್ಯಾಥ್ಸ್).
ಯುಜಿ ರ್ಯಾಂಕ್ ಪಡೆದವರು: 1. ಪಲ್ಲವಿ ಕೆಜೆ 1ನೆ ರ್ಯಾಂಕ್ ಬಿಎ (ಎಚ್‌ಆರ್‌ಡಿ), 2. ಮಂಜುಶ್ರೀ ಕೆ.ಪಿ. 3ನೆ ರ್ಯಾಂಕ್ ಬಿಎ (ಎಚ್‌ಆರ್‌ಡಿ), 3. ಶೃತಿ 7ನೆ ರ್ಯಾಂಕ್ (ಬಿಎಸ್ಸಿ), 4. ಏಕ್ತಾ 1ನೆ ರ್ಯಾಂಕ್ ಬಿಸ್ಸಿ (ಎ್ಎನ್‌ಡಿ), 5. ಪ್ರಿಯಾಂಕಾ ಪಿ. 3ನೆ ರ್ಯಾಂಕ್ (ಬಿ.ಕಾಂ), 6. ಸ್ರೀಜಿತ್ ಸಿಜಿ 1ನೆ ರ್ಯಾಂಕ್ (ಬಿವಿಎ), 7. ಅಭಿತ್ 2ನೆ ರ್ಯಾಂಕ್ (ಬಿವಿಎ), 8. ಅರ್ಷಾ ಮರಿಯಾ ಜೋನ್ 3ನೆ ರ್ಯಾಂಕ್ (ಬಿವಿಎ), 9. ಕೀರ್ತನಾ ಬೋಪಣ್ಣ ಸಿ. 1ನೆ ರ್ಯಾಂಕ್ (ಬಿಎ), 10. ಶ್ರೀಗೌರಿ ಎಸ್. ಜೋಶಿ 2ನೆ ರ್ಯಾಂಕ್ (ಬಿ.ಎ), 11.ಪ್ರಣಮ್ಯ ಭಟ್ 8ನೆ ರ್ಯಾಂಕ್ (ಬಿ.ಎ), 12. ವನಿತಾ ಡಿಕುನ್ಹಾ. 6ನೆ ರ್ಯಾಂಕ್ (ಬಿ.ಎಡ್), 13. ಅನಿಲ್ ಕುಮಾರ್ ಜೈನ್ 8ನೆ ರ್ಯಾಂಕ್ (ಬಿ.ಎಡ್), 14 ರವಿ ವಾಲ್ಕೆ 2ನೆ ರ್ಯಾಂಕ್ (ಬಿ.ಪಿಎಡ್) ಹಾಗೂ ಅರ್ಪಿತಾ ಮೇರಿ 3ನೆ ರ್ಯಾಂಕ್ (ಬಿಪಿಎಡ್)ನ್ನು ಪಡೆದಿರುತ್ತಾರೆ.