×
Ad

ವಿಕಲಚೇತನ, ಹಿರಿಯ ನಾಗರಿಕರಿಗಾಗಿ ಸಚಿವಾಲಯ ಸ್ಥಾಪನೆಯಾಗಲಿ: ರಾಜಣ್ಣ ಆಗ್ರಹ

Update: 2016-01-16 11:31 IST

‘ಟ್ಯಾಲೆಂಟ್’ನಿಂದ ವಿಕಲಚೇತನರಿಗೆ ಸ್ಫೂರ್ತಿ ನೀಡುವ ’ಸ್ವಾಭಿಮಾನ್’ ಉದ್ಘಾಟನೆ

ಮಂಗಳೂರು,ಜ.16: ವಿಕಲಚೇತನ, ಮಂಗಳಮುಖಿ ಮತ್ತು ಹಿರಿಯರ ಸಬಲೀಕರಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು ಎಂದು ರಾಜ್ಯ ವಿಕಲಚೇತನ ಇಲಾಖೆಯ ಆಯುಕ್ತ ಕೆ. ಎಸ್. ರಾಜಣ್ಣ ಆಗ್ರಹಿಸಿದರು. ನಗರದ ಪುರಭವನದಲ್ಲಿ ಇಂದು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವಿಕಲಚೇತನಿಗೆ ಸ್ಪೂರ್ತಿ ನೀಡಲು ಆಯೋಜಿಸಿದ ‘ಸ್ವಾಭಿಮಾನ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಕಲಚೇತನ, ಮಂಗಳಮುಖಿ ಮತ್ತು ಹಿರಿಯ ನಾಗರಿಕರನ್ನು ಸೇರಿಸಿದರೆ ರಾಜ್ಯದಲ್ಲಿ ಸುಮಾರು ಒಂದು ಕೋಟಿ ಜನರಿದ್ದು ಇವರ ಕಲ್ಯಾಣಕ್ಕಾಗಿ ಸಚಿವಾಲಯದ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ರಾಜ್ಯದ ಹಲವೆಡೆ , ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗೆ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಚರ್ಮರೋಗ ತಜ್ಞೆ ಡಾ.ಮಹಾಜಬೀನ್ ಮದರ್ಕರ್ ಪ್ರಸಕ್ತ ಹಲವಾರು ಕ್ಷೇತ್ರಗಳಲ್ಲಿರುವ ಸ್ಪರ್ಧೆಗೆ ಹಿಂಜರಿಯದೆ ಸವಾಲು ಎದುರಿಸಿ ಸಾಧನೆ ಮಾಡಬೇಕು ಎಂದು ತಿಳಿಸಿದರು.

   ಸಮಾರಂಭದಲ್ಲಿ ರಾಜ್ಯ ವಿಕಲಚೇತನ ಇಲಾಖೆಯ ಸಹಾಯಕ ಆಯುಕ್ತ ಪದ್ಮನಾಭ, ಮಕ್ಕಳ ಮತ್ತು ಮಹಿಳಾ ಅಭಿವೃದ್ದಿ ಅಧಿಕಾರಿ ಎ.ಉಸ್ಮಾನ್ , ದ.ಕ ಮತ್ತು ಉಡುಪಿ ಜಿಲ್ಲಾ ವಿಕಲಚೇತನರ ಅಸೋಸಿಯೇಶನ್ ಅಧ್ಯಕ್ಷ ಡಾ.ಮುರಳೀಧರ ನಾಕ್, ಆಳ್ವಾಸ್ ಎಜುಕೇಶನ್ ಟ್ರಸ್ಟ್‌ನ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಸಬಿತಾ ಮೋನಿಸ್, ಕೆಪಿಸಿ ಕಾರ್ಮಿಕ ಸಂಘಟನೆ ಚೇರ್‌ಮೆನ್ ಹೊಂಬೆಗೌಡ, ಫಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ,ಉದ್ಯಮಿ ಜಿ. ಕೆ ಶರೀಫ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಾಪಕಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಸುಲೈಮಾನ್ ಶೇಕ್ ಬೆಳುವಾಯಿ, ಶೇಕ್ ಅಬ್ದುಲ್ ಮಜೀದ್, ದಿನೇಶ್ ಶೆಟ್ಟಿ, ಫತೆ ಮುಹಮ್ಮದ್, ನೂರುನ್ನಿಸಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News