ನಾಳೆ ಎಸ್ಕೆಎಸ್ಸೆಸ್ಸೆಫ್ ನಿಂದ ವಿಚಾರಗೋಷ್ಠಿ, ಮದ್ಹುರ್ರಸೂಲ್ ಕಾರ್ಯಕ್ರಮ
ಮಂಗಳೂರು, ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಮೀಲಾದ್ ಅಭಿಯಾನದ ಪ್ರಯುಕ್ತ " ಸಹಿಷ್ಣುತೆಯ ಪ್ರವಾದಿ" ಎಂಬ ವಿಷಯದಲ್ಲಿ ವಿಚಾರಗೋಷ್ಠಿ ಹಾಗೂ ಮದ್ ಹುರ್ರಸೂಲ್ ಪ್ರಭಾಷಣವು ಜನವರಿ 17ರದಂದು ಮಧ್ಯಾಹ್ನ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಡಾನ್ ಬಾಸ್ಕೋ ಹಾಲ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಶಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಹಿಸಲಿದ್ದಾರೆ.
ದ.ಕ. ಜಂ-ಇಯ್ಯತುಲ್ ಉಲಮಾದ ಕಾರ್ಯದರ್ಶಿ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟಿಸಲಿದ್ದಾರೆ.
ಅಡ್ವಕೇಟ್ ಹನೀಫ್ ಹುದವಿ ಮದ್ ಹುರ್ರಸೂಲ್ ಭಾಷಣ ಮಾಡಲಿದ್ದಾರೆ.
ಅಝೀಝ್ ದಾರಿಮಿ ಚೊಕ್ಕಬೆಟ್ಟು, ಹುಮೆನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಕೊಲ್ಲಾಡಿ ಬಾಲಕ್ರಷ್ಣ ರೈ, ಮಂಜನಾಡಿ ಸರಕಾರಿ ಮುಸ್ಲಿಂ ವಸತಿ ಶಾಲೆಯ ಪ್ರಾಂಶುಪಾಲ ಮುರುಘಯ್ಶ ಕೊಗನೂರಮಠ 'ಸಹಿಷ್ಣುತೆಯ ಪ್ರವಾದಿ' ಎಂಬ ವಿಷಯದಲ್ಲಿ ಉಪಾನ್ಯಾಸ ನಡೆಸಲಿದ್ದಾರೆ.
ಬಂದರ್ ಕೇಂದ್ರ ಮಸೀದಿಯ ಖತೀಬರಾದ ಸ್ವದಖತುಲ್ಲಾ ಫೈಝಿ ಕಾರ್ಯಕ್ರಮ ನಿರೂಪಿಸಲಿದ್ದು,
ವಿಚಾರಗೋಷ್ಠಿಯಲ್ಲಿ ಧಾರ್ಮಿಕ, ಸಾಮಾಜಿಕ, ನೇತಾರರು,ಖ್ಶಾತ ಚಿಂತಕರು ಭಾಗವಹಿಸಲ್ಲಿದ್ದಾರೆ
ಅಲ್ಲದೆ ಬೆಳಗ್ಗೆ 10 ಗಂಟೆಗೆ ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ವತಿಯಿಂದ "ಕ್ಶಾಂಪಸ್ ಕಾಲ್ " ನಡೆಯಲಿದೆ. ಆದ್ದರಿಂದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಅಧ್ಯಕ್ಷ ಇಸ್ಹಾಕ್ ಫೈಝಿ, ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಕೋಶಾಧಿಕಾರಿ ಜಲೀಲ್ ಬದ್ರಿಯಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.