×
Ad

ಕಾಸರಗೋಡು ಜಿಲ್ಲೆಯ ಅಭಿವೃದ್ಧಿ, ಸಮಸ್ಯೆಗಳ ಕುರಿತು ಮಾಹಿತಿ ಕಲೆ ಹಾಕಿದ ಪಿಣರಾಯಿ

Update: 2016-01-16 12:47 IST

ಕಾಸರಗೋಡು, ಜ.16: ಜಿಲ್ಲೆಯ ಅಭಿವೃದ್ಧಿ ಹಾಗೂ  ಸಮಸ್ಯೆಗಳ ಕುರಿತು ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್  ಶನಿವಾರ  ಬೆಳಗ್ಗೆ  ಸಾರ್ವಜನಿಕರು ಮತ್ತು ಮುಖಂಡರಿಂದ  ಮಾಹಿತಿ  ಕಲೆ ಹಾಕಿದರು.

ಜಿಲ್ಲೆಯು  ಶಿಕ್ಷಣ, ವೈದ್ಯಕೀಯ ಸೇರಿದಂತೆ  ಬಹುತೇಕ  ವಲಯದಲ್ಲಿ  ಹಿಂದುಳಿದಿದ್ದು, ಇದಕ್ಕೆ ಪರಿಹಾರ ಕಲ್ಪಿಸುವಲ್ಲಿ ಸರಕಾರ  ಹಿಂದೆ  ಉಳಿದಿವೆ ಎಂದು ಹಲವರು  ಅಭಿಪ್ರಾಯಪಟ್ಟರು.
ಕಾರ್ಯಕಾರಿ ಸಮಿತಿ ಸದಸ್ಯ  ಎಂ.ವಿ ಗೋವಿಂದನ್, ಕೆ.ಜೆ.ಥಾಮಸ್, ಸಂಸದ ಪಿ.ಕೆ.ಬಿಜು , ಎ.ಸಂಪತ್, ಪಿ.ಕೆ.ಸೈನಬಾ , ಶಾಸಕ  ಕೆ..ಟಿ.ಜಲೀಲ್, ಜಿಲ್ಲಾ ಕಾರ್ಯದರ್ಶಿ  ಶಾಸಕರಾದ ಕೆ.ಕುಂಞರಾಮನ್, ಕೆ.ಪಿ.ಸತೀಶ್ಚಂದ್ರನ್,  ಮಾಜಿ ಶಾಸಕ ಸಿ.ಎಚ್.ಕುಂಞಾಬು, ಕೆ.ಆರ್.ಜಯಾನಂದ ಮೊದಲಾದವರು  ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News