×
Ad

ಏನು ತಿನ್ನಬೇಕು , ಯಾವ ಸಮವಸ್ತ್ರ ಧರಿಸಬೇಕು ಎಂದು ಸಂಘ ಪರಿವಾರ ನಿರ್ಧರಿಸುವ ಸ್ಥಿತಿ ನಿರ್ಮಾಣವಾಗಿದೆ: ಪಿಣರಾಯಿ

Update: 2016-01-16 14:50 IST

ಕಾಸರಗೋಡು : ದೇಶದಲ್ಲಿ  ಅಸಹಿಷ್ನುತೆ ಇದ್ದು , ಮಧ್ಯಪ್ರದೇಶದಲ್ಲಿ  ನಡೆದ  ಘಟನೆ ಸಾಕ್ಷಿ  ಎಂದು  ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯ ಪಿಣರಾಯಿ  ವಿಜಯನ್  ಹೇಳಿದರು. ಅವರು ಶನಿವಾರ ಕಾಸರಗೋಡಿನಲ್ಲಿ  ಸುದ್ದಿಗಾರರೊಂದಿಗೆ  ಮಾತನಾಡುತ್ತಿದ್ದರು.

ಏನು ತಿನ್ನಬೇಕು , ಯಾವ  ಸಮವಸ್ತ್ರ  ಧರಿಸಬೇಕು ಎಂಬ ಬಗ್ಗೆ ಇಂದು  ಸಂಘ ಪರಿವಾರ ಹೇಳುವಂತೆ  ನಡೆಯುವ ಸ್ಥಿತಿ ನಿರ್ಮಾಣವಾಗಿದೆ .  ಸಂಚಾರ  ಸ್ವಾತಂತ್ರ್ಯಕ್ಕೂ ಅಡ್ಡಿಪಡಿಸಲಾಗುತ್ತಿದೆ . ಮೋದಿ  ಸರಕಾರ  ಅಧಿಕಾರವನ್ನು  ಸಂಘ ಪರಿವಾರಕ್ಕೆ ನೀಡಿದೆ ಎಂದರು .ಕೇರಳದಲ್ಲೂ ನೆಲೆಯೂರಲೂ ಸಂಘ ಪರಿವಾರ ಎಲ್ಲಾ ರೀತಿಯ  ತಂತ್ರ  ನಡೆಸುತ್ತಿದೆ  .   ಇದಕ್ಕೆ  ಕೇರಳದ  ಜನತೆ ಅವಕಾಶ  ನೀಡಲಾರರು ಎಂದರು .

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ  ಎಂ . ವಿ ಗೋವಿಂದನ್ , ಕೆ. ಜೆ  ಥಾಮಸ್, ಸಂಸದ ಪಿ .ಕೆ ಬಿಜು , ಎ . ಸಂಪತ್ ,  ಪಿ. ಕೆ  ಸೈನಬಾ , ಶಾಸಕ  ಕೆ. ಟಿ ಜಲೀಲ್ , ಜಿಲ್ಲಾ ಕಾರ್ಯದರ್ಶಿ   ಕೆ . ಪಿ  ಸತೀಶ್ಚಂದ್ರನ್,  ಮಾಜಿ ಶಾಸಕ ಸಿ . ಎಚ್  ಕುನ್ಚಂಬು , ಕೆ .  ಆರ್  ಜಯಾನಂದ ಮೊದಲಾದವರು  
ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News