×
Ad

10 ಬಿಲಿಯನ್ ಡಾಲರ್ ಹೂಡಿಕೆ :ಜಪಾನ್ ಸಾಫ್ಟ್ ಬ್ಯಾಂಕ್ ಅಧ್ಯಕ್ಷ

Update: 2016-01-16 15:23 IST


ಚೀನಾಕ್ಕಿಂತ ಬಂಡವಾಳ ಹೂಡಿಕೆಗೆ ಭಾರತವೇ ಮೇಲು ಎಂದು ಅಭಿಪ್ರಾಯಪಟ್ಟಿರುವ ಜಪಾನ್ ನ ಪ್ರತಿಷ್ಠಿತ ಸಾಫ್ಟ್ ಬ್ಯಾಂಕ್ ತಾನು ಕಳೆದ ಒಂದು ವರ್ಷದಲ್ಲಿ  2 ಬಿಲಿಯನ್ ಡಾಲರ್ ಭಾರತದ ವಿವಿಧ ಕಂಪೆನಿಗಳಲ್ಲಿ ಹೂಡಿದ್ದು ಮುಂದಿನ ವರ್ಷದಲ್ಲಿ ಇದನ್ನು 10 ಬಿಲಿಯನ್ ಡಾಲರ್ ಗೆ ಹೆಚ್ಚಿಸುವ  ಎಂದು ಹೇಳಿದೆ. 


ನನಗೆ ಇಂಟರ್ನೆಟ್ ಹಾಗು ಸೌರ ಶಕ್ತಿ ಕ್ಷೇತ್ರದಲ್ಲಿ ಅಪಾರ ಆಸಕ್ತಿಯಿದ್ದು , ಭಾರತ ಸರಕಾರ ಮೊಬೈಲ್ ದೂರವಾಣಿಯ ಮೂಲಭೂತ ಸೌಲಭ್ಯಗಲನ್ನು ಹೆಚ್ಚಿಸುವ ಮೂಲಕ ನಿಧಾನ ಗತಿಯ ಇಂಟರ್ನೆಟ್ ಸಮಸ್ಯೆಯನ್ನು ಪರಿಹರಿಸಬೇಕೆಂದು ಸಾಫ್ಟ್ ಬ್ಯಾಂಕ್ ಅಧ್ಯಕ್ಷ ಹಾಗು ಸಿ ಇ ಒ ಮಸಯೋಷಿ ಸನ್ ಹೊಸದಿಲ್ಲಿಯಲ್ಲಿ ಸ್ಟಾರ್ಟ್ ಅಪ್ ಸಮಾವೇಶದಲ್ಲಿ  ಹೇಳಿದ್ದಾರೆ. ಭಾರತದ ಬಗ್ಗೆ ತಿಳಿದಷ್ಟು ನನಗೆ ಈ ದೇಶದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. 21 ನೆ ಶತಮಾನ ಭಾರತದ ಶತಮಾನವಾಗಿದ್ದು , ಇಲ್ಲಿ ವಿಪುಲ ಅವಕಾಶಗಳಿವೆ ಎಂದು ಅವರು ಹೇಳಿದ್ದಾರೆ . 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News