×
Ad

ಕಾಸರಗೋಡು: ಪೊಲೀಸ್ ವಶದಲ್ಲಿದ್ದ 30 ವಾಹನಗಳು ಬೆಂಕಿಗಾಹುತಿ

Update: 2016-01-16 16:06 IST

ಕಾಸರಗೋಡು, ಜ.16: ಹಲವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಕಸ್ಟಡಿಗೆ ಪಡೆದಿದ್ದ ವಾಹನಗಳು ಅಗ್ನಿಗಾಹುತಿಯಾದ ಘಟನೆ ಶುಕ್ರವಾರ ನಡೆದಿದ್ದು, ಸುಮಾರು 30 ವಾಹನಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಕರಕಲಾಗಿವೆ. ಈ ನಡುವೆ ಬೆಂಕಿ ಅನಾಹುತಕ್ಕೆ ದುಷ್ಕರ್ಮಿಗಳ ಕೈವಾಡವಿರುವ ಬಗ್ಗೆ ಶಂಕೆ ಉಂಟಾಗಿದ್ದು, ಈ ಕುರಿತು ವಿದ್ಯಾನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 ಜಿಲ್ಲೆಯ ಪೊಲೀಸ್ ಠಾಣಾ ಆವರಣದಲ್ಲಿ ವಾಹನಗಳನ್ನಿರಿಸಲು ಸ್ಥಳಾವಕಾಶದ ಕೊರತೆ ಇರುವುರಿಂದ ಅವುಗಳನ್ನು ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿ ಪಕ್ಕದ ವಿಶಾಲ ಸ್ಥಳವೊಂದರಲ್ಲಿ ನಿಲುಗಡೆಗೊಳಿಸಲಾಗಿದೆ. ಅದರಂತೆ ಬಸ್ಸು, ಲಾರಿ, ಕಾರು ಎಂಬಂತೆ ಸುಮಾರು 200ಕ್ಕೂ ಅಧಿಕ ವಾಹನಗಳು ಇಲ್ಲಿ ನಿಲ್ಲಿಸಲ್ಪಟ್ಟಿವೆ. ಈ ಸ್ಥಳಕ್ಕೆ ನಿನ್ನೆ ಬೆಂಕಿ ಬಿದ್ದು ವಾಹನಗಳು ಭಸ್ಮವಾಗಿವೆ. ಐದು ವಾಹನಗಳು ಪೂರ್ಣ ಮತ್ತು 25 ವಾಹನಗಳು ಭಾಗಶಃ ಸುಟ್ಟು ಕರಕಲಾಗಿವೆ.ಕಾಸರಗೋಡಿನಿಂದ ತಲುಪಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು ವಿದ್ಯಾನಗರ, ಕಾಸರಗೋಡು ಹಾಗೂ ಜಿಲ್ಲೆಯ ಇನ್ನಿತರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ, ಮರಳು, ಗಾಂಜಾ ಸಾಗಾಟ ಹಾಗೂ ಇನ್ನಿತರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಈ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News