ಮೂಡುಬಿದಿರೆ : ವ್ಯಕ್ತಿ ಕಾಣೆ
Update: 2016-01-16 16:32 IST
ಮೂಡುಬಿದಿರೆ: ನಿಡ್ಡೋಡಿ ಗ್ರಾಮದ ನಂದಬೆಟ್ಟು ನಿವಾಸಿ ಶೇಖರ ಶೆಟ್ಟಿ (48 ವ.) ಬುಧವಾರ (ಜ.13 ರಂದು) ಬೆಳಿಗ್ಗೆ 8.30.ಕ್ಕೆ ಕೆಲಸಕ್ಕೆಂದು ನಿಡ್ಡೋಡಿ ಗ್ರಾಮದ ಶುಂಠಿಲಪದವು ಎಂಬಲ್ಲಿರುವ ಟೈಲರಿಂಗ್ ಅಂಗಡಿಗೆ ಹೋದವರು ವಾಪಸು ಮನೆಗೆ ಬಾರದೆ ಕಾಣೆಯಾಗಿದ್ದಾರೆಂದು ಅವರ ಪತ್ನಿ ದಯಾವತಿ ಎಸ್.ಶೆಟ್ಟಿ ಗುರುವಾರ ಮೂಡುಬಿದರೆ ಠಾಣೆಗೆ ದೂರು ನೀಡಿದ್ದಾರೆ.
ಚಹರೆ ಇಂತಿವೆ: ಎತ್ತರ 5 ಅಡಿ- 5 ಇಂಚು,ಗೋಧಿ ಮೈಬಣ್ಣ, ಸಾಧಾರಣ ಶರೀರ, ತಲೆಯ ಮಧ್ಯಭಾಗದಲ್ಲಿ ಕೂದಲು ಇರುವುದಿಲ್ಲ, ತುಳು-ಕನ್ನಡ ಮಾತನಾಡುತ್ತಾರೆ.ನೀಲಿ ಬಣ್ಣದ ಅರ್ಧ ತೋಳಿನ ಅಂಗಿ, ಸ್ಲೇಟು ಬಣ್ಣದ ಪ್ಯಾಂಟು, ಕಪ್ಪು ಪಾದರಕ್ಷೆ ಧರಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: ಮೂಡುಬಿದಿರೆ ಪೊಲೀಸು ಠಾಣೆ-08258-236333; ಪೊಲೀಸು ನಿರೀಕ್ಷಕರು-9480802314; ಕಂಟ್ರೋಲ್ ರೂಂ-0824-2220800/100.