ಪತಿ ನಾಪತ್ತೆ: ಆರೂವರೆ ವರ್ಷದ ಬಳಿಕ ಪತ್ನಿಯಿಂದ ದೂರು!
Update: 2016-01-16 23:06 IST
ಬಂಟ್ವಾಳ, ಜ.16: ಆರೂವರೆ ವರ್ಷದ ಹಿಂದೆ ನಾಪತ್ತೆಯಾದ ವ್ಯಕ್ತಿಯ ಕುರಿತಾಗಿ ಪತ್ನಿ ಶುಕ್ರವಾರ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಬೆಂಜನಪದವು ಗ್ರಾಮದ ಕರಾವಳಿ ಸೈಟ್ ನಿವಾಸಿ ವಿಮಲಾ ಎಂಬವರು ದೂರು ನೀಡಿದರು. ತನ್ನ ಪತಿ ಪೂವಪ್ಪ ಸಾಲ್ಯಾನ್ 2009ರ ಎಪ್ರಿಲ್ 18ರಂದು ನಾಪತ್ತೆಯಾದವರು ಈತನಕ ವಾಪಸ್ ಬಂದಿಲ್ಲ. ಕಾನೂನಿನ ಅರಿವು ಇಲ್ಲದೆ ಇದ್ದುದರಿಂದ ಈತನಕ ಪೊಲೀಸ್ ದೂರು ನೀಡಿರಲಿಲ್ಲ ಎಂದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.