ಲೈಂಗಿಕ ಕಿರುಕುಳ: ಆರೋಪಿ ಬಂಧನ
Update: 2016-01-16 23:07 IST
ಕುಂದಾಪುರ, ಜ.16: ಬಳ್ಳೂರು ಎಂಬಲ್ಲಿ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಗಜೇಂದ್ರ ಬಳ್ಕೂರು ಎಂದು ಗುರುತಿಸಲಾಗಿದೆ. ಈತ ತನ್ನ ನೆರೆಮನೆಯ 13ರ ಹರೆಯದ ಶಾಲಾ ಬಾಲಕಿಗೆ ಕಳೆದ ಮೂರು ತಿಂಗಳುಗಳಿಂದ ಪ್ರತಿನಿತ್ಯವೂ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಈ ವಿಚಾರ ಬಾಲಕಿ ಆಕೆಯ ತಂದೆಯ ಗಮನಕ್ಕೆ ತಂದಳು. ಅದರಂತೆ ಬಾಲಕಿಯ ತಂದೆ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಆರೋಪಿ ಗಜೇಂದ್ರನನ್ನು ಪೊಕ್ಸೊ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.