×
Ad

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ -ಡಾ.ಜಿ.ಪರಮೇಶ್ವರ ವಿಷಾದ

Update: 2016-01-16 23:16 IST

ಸಂದೇಶ ಪ್ರಶಸ್ತಿ ಪ್ರಧಾನ 2016 ಸಮಾರಂಭ ಮಂಗಳೂರು,ಜ.16:ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ದೇಶದಲ್ಲಿ ಸ್ವಾತಂತ್ರ,ಸಮಾನತೆ ,ಭ್ರಾತೃತ್ವ ಎತ್ತಿಹಿಡಿದ ಡಾ.ಬಾಬಾ ಸಾಹೇಬರ ಸಂವಿಧಾನ ಇದ್ದರೂ ಅಸಹಿಷ್ಣುತೆ ವಾತವರಣ ಹೆಚ್ಚಾಗುತ್ತಿರುವುದ ವಿಷಾದನೀಯ ಎಂದು ಕರ್ನಾಟಕ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

             ಅವರು ಇಂದು ನಗರದಲ್ಲಿ ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ 2016ನೆ ಸಾಲಿನ 25ವರ್ಷದ ಸಂದೇಶ ಪ್ರಶಸ್ತಿ ಯನ್ನು ಎಂಟು ಮಂದಿ ಸಾಧಕರಿಗೆ ವಿತರಿಸುವ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.
                   ಭಾರತದಲ್ಲಿ ಜಾತಿಯ ಆಧಾರದಲ್ಲಿ ಕಂದರವನ್ನು ಸೃಷ್ಟಿಸಿದವರು,ಧರ್ಮಗಳ ನಡುವೆ ವೈಷಮ್ಯವನ್ನು ಉಂಡುಮಾಡಿದವರು,ನಾವು ಏನನ್ನು ತನ್ನಬೇಕು?,ಏನನ್ನು ಉಡಬೇಕು ಏನು ಮಾಡಬೇಕು ಎನ್ನುವುದನ್ನು ನಿಯಂತ್ರಿಸಲು ಹೊರಟಿದ್ದಾರೆ.ಆದರೆ ಇದನ್ನು ಈ ದೇಶದ ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ.ಭಾರತೀಯರಿಗೆ ಸಂವಿಧಾನದಲ್ಲಿ ಸಮಾನ ಅವಕಾಶಗಳನ್ನು ನೀಡಿದೆ.ಬದುಕಲು ಮುಕ್ತ ಅವಕಾಶವನ್ನು ನೀಡಿದೆ ಈ ಆಶಯಗಳನ್ನೇ ಬಲಿಕೊಡುವ ಪ್ರಯತ್ನ ನಡೆಯುತ್ತಿರುವುದು ಕಳವಳಕಾರಿಯಾಗಿದೆ ಎಂದು ಪರಮೇಶ್ವರ ತಿಳಿಸಿದರು.ಈ ನಿಟ್ಟಿನಲ್ಲಿ ಕಲೆ ಸಂಸ್ಕೃತಿಯ ಮೂಲಕ ಜನರನ್ನು ಒಂದು ಗೂಡಿಸುವ ಕೆಲಸ ಸಂದೇಶ ಸಂಸ್ಥೆಯ ಮೂಲಕ ನಡೆಯುತ್ತಿರುವುದು ಶ್ಲಾಘನೀಯ ಎಂದರು.
  ಸಮಾರಂಭದಲ್ಲಿ ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ಗ್ಲಾಡಿಸ್ ರೇಗೊ,ಸಂದೇಶ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಸುಗಂಥಾ ಸತೀಯರಾಜ್ ,ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ ಡಾ.ಎಚ್.ಎಸ್ .ವೆಂಕಟೇಶ ಮೂರ್ತಿ ,ಸಂದೇಶ ತುಳು ಸಾಹಿತ್ಯ ಪ್ರಶಸ್ತಿ ದೇವದಾಸ್ ಕಾಪಿಕಾಡ್,ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ ಜೊಯೆಲ್ ಪಿರೇರಾ,ಸಂದೇಶ ಕಲಾ ಪ್ರಶಸ್ತಿ ಉಸ್ತಾದ್ ರಫೀಕ್ ಖಾನ್,ಸಂದೇಶ ಮಾಧ್ಯಮ ಪ್ರಶಸ್ತಿ ಥಾಮಸ್ ಡಿ ಸೋಜ ,ಸಂದೇಶ ವಿಶೇಷ ಪ್ರಶಸ್ತಿ ಜಿ.ಎಸ್.ಜಯದೇವ ರವರಿಗೆ ನೀಡಿ ಗೌರವಿಸಲಾಯಿತು.
     ಬೆಂಗಳೂರು ಕಥೋಲಿಕ್ ಕ್ರೈಸ್ತ ಮಹಾ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅತಿ.ವಂ.ಬರ್ನಾಡ್ ಮೊರಾಸ್ ಕಲೆ,ಸಂಸ್ಕೃತಿ ಜೀವನದ ಅಂಗವಾಗಬೇಕು ಮತ್ತು ನೆಮ್ಮದಿಯ ಶಾಂತಿಯ ಬದುಕಿಗೆ ಸಹಾಯವಾಗುವಂತಾಗಬೇಕು ಎಂದರು.
   ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಅಧ್ಯಕ್ಷರಾದ ಅತಿ.ವಂ.ಅಲೋಶಿಯಸ್ ಪಾವ್ಲ್ ಡಿ ಸೋಜ,ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ.ವಂ.ಜೆರಾಲ್ಡ್ ಐಸಾಕ್ ಲೋಬೊ,ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ,ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ನಾ.ಡಿ.ಸೋಜ.ಸಂದೇಶ ಪ್ರತಿಷ್ಠಾನದ ಟ್ರಸ್ಟಿ ವಂ.ಐವನ್ ಪಿಂಟೊ ಶಾಸಕರಾದ ಜೆ.ಆರ್.ಲೊಬೊ,ಐವನ್ ಡಿ ಸೋಜ ಮೊದಲಾದವರು ಉಪಸ್ಥಿತರಿದ್ದರು.
ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ.ವಿಕ್ಟರ್ ವಿಜಯ್ ಲೋಬೊ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News