×
Ad

ಪರ್ಯಾಯಕ್ಕೆ ಸಿಎಂ ಬಾರದ ನಷ್ಟ ನಾವು ತುಂಬಿದ್ದೇವೆ: ಗೃಹಸಚಿವ ಪರಮೇಶ್ವರ್

Update: 2016-01-16 23:54 IST

ಉಡುಪಿ, ಜ.16: ಐತಿಹಾಸಿಕ ಐದನೆ ಬಾರಿ ಪರ್ಯಾಯ ಪೀಠವನ್ನೇರಲಿರುವ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯನ್ನು ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಇಂದು ರಾತ್ರಿ ವೇಳೆ ಶ್ರೀಕೃಷ್ಣ ಮಠದ ರಾಜಾಂಗಣದ ಪಾರ್ಕಿಂಗ್ ಸ್ಥಳದಲ್ಲಿರುವ ಯಾತ್ರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಜ.18ರಂದು ನಡೆಯುವ ಪರ್ಯಾಯ ಮೆರವಣಿಗೆ ಹಾಗೂ ದರ್ಬಾರ್‌ನಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ರಾತ್ರಿ ಮಂಗಳೂರಿನಿಂದ ಆಗಮಿಸಿದ ಸಚಿವರು ಸ್ವಾಮೀಜಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಪರಮೇಶ್ವರ್, ಝೆಡ್ ಕೆಟಗರಿ ಭದ್ರತೆಯ ಗಣ್ಯರು ಆಗಮಿಸುವುದರಿಂದ ಬಂದೋಬಸ್ತ್ ಕುರಿತು ಐಜಿಪಿ ಹಾಗೂ ಎಸ್ಪಿ ಜೊತೆ ಮಾತುಕತೆ ನಡೆಸಿ ಪರಿಶೀಲನೆ ಮಾಡಿದ್ದೇನೆ. ಪರ್ಯಾಯ ಮಹೋತ್ಸವ ಸುಗಮವಾಗಿ ನಡೆಯಲು ಇಲಾಖೆಯಿಂದ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಕಷ್ಟು ಕೆಲಸಗಳಿರುವುದರಿಂದ ಪರ್ಯಾಯಕ್ಕೆ ಬರಲು ಆಗುತ್ತಿಲ್ಲ. ಅವರ ಬಾರದೆ ಆಗಿರುವ ನಷ್ಟವನ್ನು ನಾವೆಲ್ಲ ಬರುವ ಮೂಲಕ ತುಂಬುತ್ತಿದ್ದೇವೆ. ನಾಳೆ ಕೂಡ ಹೆಚ್ಚಿನ ರಾಜ್ಯ ಸಚಿವರು ಆಗಮಿಸಲಿರುವರು. ನಾಳೆ ನನಗೂ ಸಾಕಷ್ಟು ಕೆಲಸ ಕಾರ್ಯ ಇರು ವುದರಿಂದ ದರ್ಬಾರ್‌ಗೆ ಬರಲು ಆಗುತ್ತಿಲ್ಲ. ಸ್ವಾಮೀಜಿ ಬರುವಂತೆ ಆಹ್ವಾನ ಮಾಡಿದ್ದಾರೆ. ನಾನು ಆ ಬಗ್ಗೆ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News