×
Ad

ಉದ್ಯಾವರ: ಪ್ರವಾದಿ ಪ್ರಕೀರ್ತನ ಮಜ್ಲಿಸ್

Update: 2016-01-17 00:02 IST

ಕುಂಜತ್ತೂರು, ಜ.16: ಉದ್ಯಾವರ ಮಖಾಂ ಉರೂಸ್ ಅಂಗವಾಗಿ ಶುಕ್ರವಾರ ರಾತ್ರಿ ಪ್ರವಾದಿ ಪ್ರಕೀರ್ತನ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು.
 ಎಂ.ಅಲಿಕುಂಞಿ ಉಸ್ತಾದ್ ಶಿರಿಯ ಪ್ರವಾದಿ ಪ್ರಕೀರ್ತನೆಯನ್ನು ಉದ್ಘಾಟಿಸಿ ವಿಶೇಷ ಪ್ರಾರ್ಥನೆಗೆ ನೇತೃತ್ವ ನೀಡಿದರು. ಅಸ್ಸೈಯ ಸುಹೈಲ್ ಅಸ್ಸಖಾಫ್ ತಂಙಳ್ ಮುಖ್ಯ ಪ್ರವಚನ ನೀಡಿದರು. ಜಮಾಅತ್ ಅಧ್ಯಕ್ಷ ಅತಾವುಲ್ಲ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಬಶೀರ್ ಕಜೆ, ಹನೀಫ್ ಪಿ.ಎ., ಇಸ್ಮಾಯೀಲ್ ಹಾಜಿ, ಗಫೂರ್ ಹಾಜಿ, ಖಾದರ್ ಫಾರೂಕ್, ಪೂಕುಂಞಿ ತಂಙಳ್ ಮತ್ತಿತರರು ಉಪಸ್ಥಿತರಿದ್ದರು.
ಜ.17ರಂದು ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಹಾಗೂ ಮುಳ್ಳೂರುಕ್ಕರ ಮುಹಮ್ಮದ್ ಅಲಿ ಸಖಾಫಿ ಭಾಗವಹಿಸುವರು. ಉರೂಸ್ ಕಾರ್ಯಕ್ರಮದ ನೇರ ಪ್ರಸಾರವು ಡಿಡಿಡಿ.14.ಠಿನಲ್ಲಿ ಇರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News