ಪೇಜಾವರ ಪರ್ಯಾಯ ಅವಧಿಯಲ್ಲಿ ಸೌಹಾರ್ದ ವೃದ್ಧಿಸಲಿ: ಉಡುಪಿ ಬಿಷಪ್
Update: 2016-01-17 00:34 IST
ಉಡುಪಿ: ಐದನೆ ಬಾರಿಗೆ ಕೃಷ್ಣಮಠದ ಪರ್ಯಾಯ ಸರ್ವಜ್ಞ ಪೀಠವನ್ನು ಪೇಜಾವರ ಶ್ರೀವಿಶ್ವೇಶತೀರ್ಥರು ಏರುವ ಈ ಸಂದರ್ಭದಲ್ಲಿ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯಲಿ. ಅವರ ಅವಧಿಯಲ್ಲಿ ಉಡುಪಿಯಲ್ಲಿ ಶಾಂತಿ ಸೌಹಾರ್ದ ವರ್ಧಿಸಿ, ಸರ್ವ ಜನಾಂಗದ ಶಾಂತಿಯ ತೋಟವಾಗಲಿ. ಅವರ ಮುಂದಿನ ಎಲ್ಲಾ ಯೋಚನೆ, ಯೋಜನೆಗಳು ಯಶಸ್ವಿಯಾಗಲು ದೇವರ ಪರಮ ಅನುಗ್ರಹವಿರಲಿ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹಾರೈಸಿದ್ದಾರೆ.
ಶ್ರೀಕೃಷ್ಣಮಠದ ಧರ್ಮಪೀಠಕ್ಕೆ ಹೊಸಮುಖವನ್ನು ಕೊಟ್ಟ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯು, ದೀನರ ಸೇವೆ ಸಾಧಕನಿಗೆ ಅನಿವಾರ್ಯ ಕರ್ತವ್ಯ ಎಂಬ ಶ್ರೀಮಧ್ವಾಚಾರ್ಯರ ಸಂದೇಶವನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಬಿಷಪ್ ಹೇಳಿದರು.