×
Ad

ಕಡ್ಡಾಯ ಮಲಯಾಳಂ ಮಸೂದೆ ವಿರುದ್ಧ ಖಂಡನಾ ಸಭೆ

Update: 2016-01-17 11:27 IST

ಕಾಸರಗೋಡು: ಕೇರಳ ಸರಕಾರ ಜಾರಿಗೆ  ತಂದಿರುವ ಕಡ್ಡಾಯ ಮಲಯಾಳಂ ಮಸೂದೆಯನ್ನು ಪ್ರತಿಭಟಿಸಿ  ಕಾಸರಗೋಡು  ಕನ್ನಡಿಗರ  ಸಂಘಟನೆಗಳ  ಸಭೆ  ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್  ಸಭಾಂಗಣದಲ್ಲಿ  ರವಿವಾರ  ನಡೆಯಿತು.

ಸಭೆಯಲ್ಲಿ ಭಾಷಾ ಮಸೂದೆ  ತಿದ್ದುಪಡಿಗೊಳಿಸಿರುವ  ಸರಕಾರದ ಕ್ರಮದ  ವಿರುದ್ದ ಹೋರಾಟ  ನಡೆಸುವ ನಿಟ್ಟಿನಲ್ಲಿ  ಚರ್ಚೆಗಳು  ನಡೆಯುತ್ತಿವೆ.
ಕನ್ನಡ ಹೋರಾಟಗಾರ  ಪುರುಷೋತ್ತಮ ಭಟ್ ,  ಉಮೇಶ್  ಸಾಲಿಯಾನ್ , ಬಳ್ಳುಕ್ಕರಾಯ , ಕೆ.ಶ್ರೀಕಾಂತ್  ಮೊದಲಾದವರು ಉಪಸ್ಥಿತರಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News