×
Ad

ಏಮ್ಸ್ ಕಾಲೇಜಿನಲ್ಲಿ ವಿವೇಕಾನಂದ ಜನ್ಮದಿನಾಚರಣೆ ಆಚರಣೆ

Update: 2016-01-17 13:25 IST

ಕಡಬ, ಜ.17. ಇಲ್ಲಿನ ಏಮ್ಸ್ ಪ್ರಥಮ ದರ್ಜೆ ಕಾಲೇಜು ಇದರ ಕನ್ನಡ ಸಂಘದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಯುವ ದಿನಾಚರಣೆಯನ್ನು ಆಚರಿಸಲಾಯಿತು. ಏಮ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಫೌಝಿಯಾ ಬಿ.ಎಚ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಸಂಪೂರ್ಣವಾಗಿ ಪಾಲಿಸಿದಾಗ ಮಾತ್ರ ವ್ಯಕ್ತಿಯು ಜೀವನದಲ್ಲಿ ಪರಿಪೂರ್ಣತೆಯನ್ನು ಹೊಂದಿದವನಾಗುತ್ತಾನೆ ಎಂದರು. ಮುಖ್ಯ ಅತಿಥಿಗಳಾಗಿ ಇತಿಹಾಸ ಸಂಘದ ಸಂಯೋಜಕಿ ನಳಿನಾಕ್ಷಿ ಹಾಗೂ ಪ್ರಾಂಶುಪಾಲೆ ಸೆಮೀರಾ ಕೆ.ಎ. ಭಾಗವಹಿಸಿದ್ದರು.  ಕನ್ನಡ ಸಂಘದ ಸಂಯೋಜಕಿ ಜಯಂತಿ ಸ್ವಾಗತಿಸಿ, ಅನೀಷಾ ವಂದಿಸಿದರು. ಸಾಹಿರಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News