×
Ad

ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ,ಆತ್ಮಾಹುತಿ ದಾಳಿಯಿಂದ 11 ಸಾವು

Update: 2016-01-17 13:36 IST


ಕಾಬೂಲ್, ಜ.17: ಇಲ್ಲಿನ ಜಲಾಲಾಬಾದ್‌ನಲ್ಲಿರುವ ಅಧಿಕಾರಿಗಳ ಮನೆಯ ಬಳಿ ಆತ್ಮಾಹುತಿ ದಾಳಿಯಿಂದ 11 ಮಂದಿ ಮೃತಪಟ್ಟಿದ್ಧಾರೆ. 20ಕ್ಕೂ ಅಧಿಕ ಜನರು ಗಾಯಗೊಂಡಿದ್ಧಾರೆ.
ಅಧಿಕಾರಿಗಳ ಮನೆಯನ್ನು ಗುರಿಯಾಗಿಸಿ ನಡೆದ ಬಾಂಬ್ ದಾಳಿಯಿಂದಾಗಿ ಅಫ್ಘಾನಿಸ್ತಾನ ತತ್ತರಿಸಿದೆ.
ಜಲಾಲ್‌ಬಾದ್‌ನ ಪ್ರಾಂತೀಯ ಕೌನ್ಸಿಲ್ ಸದಸ್ಯ ಒಮೈದುಲ್ಲಾ ಶೆನ್ವಾರಿ ಬಳಿ ಆತ್ಮಾಹುತಿ ದಾಳಿ ನಡೆದಿದೆ. ಮೃತಪಟ್ಟವರಲ್ಲಿ ಭದ್ರತಾ ಪಡೆಯ 7 ಸಿಬ್ಬಂದಿಗಳು ಸೇರಿದ್ಧಾರೆ. ದಾಳಿ ನಡೆಸಿದ ಎಲ್ಲ ಮೂವರು ಬಾಂಬರ್‌ಗಳು ಹತರಾಗಿದ್ದಾರೆ,
ಉಗ್ರರು ಮೊದಲು ಅಧಿಕಾರಿಗಳ ಮನೆಗಳ ಮೇಲೆ ಗಂಡಿನ ದಾಳಿ ನಡೆಸಿದರು. ಬಳಿಕ ಬಾಂಬ್ ಸ್ಫೋಟಿಸಿದರು ಎಂದು   ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News