ಕೇಜ್ರಿವಾಲ್ ಮುಖಕ್ಕೆ ಶಾಯಿ ಎರಚಿದ ಮಹಿಳೆ !
ಹೊಸದಿಲ್ಲಿ, ಜ.17: ಸಮ-ಬೆಸ ಸಂಖ್ಯೆ ಸಂಚಾರ ಯೋಜನೆಯ ಯಶಸ್ವಿನ ಬಗ್ಗೆ ಛತ್ರಸಾಲ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ಅಭಿನಂದನಾ ಸಮಾರಂಭದಲ್ಲಿ ಆಕ್ರೋಶಗೊಂಡ ಮಹಿಳೆಯೊಬ್ಬಳು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಖಕ್ಕೆ ಶಾಯಿ ಎರಚಿದ ಘಟನೆ ಇಂದು ಸಂಜೆ ನಡೆದಿದೆ.
ಕೇಜ್ರಿವಾಲ್ ಭಾಷಣ ಮಾಡುತ್ತಿದ್ದಾಗ ಭದ್ರತಾ ವ್ಯವಸ್ಥೆಯನ್ನು ಭೇದಿಸಿ ವೇದಿಕೆಯತ್ತ ನುಗ್ಗಿದ ಮಹಿಳೆಯೊಬ್ಬಳು ಮುಖ್ಯ ಮಂತ್ರಿ ಕೇಜ್ರಿವಾಲ್ ಮುಖಕ್ಕೆ ಶಾಯಿ ಎರಚಿದಳು ಹಾಗೂ ಸಿಡಿ ಹಾಗೂ ಪೇಪರ್‌ಗಳನ್ನು ಮುಖ್ಯ ಮಂತ್ರಿಯವರತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದರೆನ್ನಾಗಿದೆ.
ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡರೂ, ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಮಹಿಳೆಯ ವಿರುದ್ಧ ಕ್ರಮಕೈಗೊಳ್ಳದೆ ಬಿಟ್ಟುಬಿಡುವಂತೆ ಆದೇಶ ನೀಡಿದರು.
ಮುಖ್ಯಮಂತ್ರಿಯ ಕಾರ್ಯಕ್ರಮಕ್ಕೆ ಬಿಗು ಭದ್ರತೆ ಇದ್ದರೂ ಮಹಿಳೆ ಮುಖ್ಯಮಂತ್ರಿ ಬಳಿಗೆ ಹೇಗೆ ಹೋದರು ಎನ್ನುವುದು ನಿಗೂಢವಾಗಿದೆ. ಘಟನೆಗೆ ಸಂಬಂಧಿಸಿ ವರದಿ ನೀಡುವಂತೆ ದಿಲ್ಲಿ ಪೊಲೀಸ್ ಆಯುಕ್ತರಾದ ಬಿ.ಎಸ್ ಬಸ್ಸಿ ಅವರು ಪೊಲೀಸ್ ವಿಭಾಗೀಯ ಆಯುಕ್ತರಿಗೆ ಆದೇಶ ನೀಡಿದ್ಧಾರೆ.