×
Ad

ಕರಾವಳಿ ಕಡಲ ತೀರದಲ್ಲಿ ಜನಾಕರ್ಷಣೆಯ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

Update: 2016-01-17 18:55 IST


      ಕರಾವಳಿ ಕಡಲ ತೀರದಲ್ಲಿ ಜನಾಕರ್ಷಣೆಯ ಅಂತರಾಷ್ಟ್ರೀಯಗಾಳಿಪಟಉತ್ಸವ ಮಂಗಳೂರು,ಜ,17:ಕರಾವಳಿಯ ಪಣಂಬೂರು ಕಡಲ ತೀರದಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಎರಡನೆ ಹಾಗೂ ಸಮಾರೋಪ ದಿನವಾದ ಇಂದು ಸಂಜೆ ವಿವಿಧ ಕಡೆಯಿಂದ ಆಗಮಿಸಿದ ಜನರು ಆಕಾಶದಲ್ಲಿ ತೇಲುವ ವರ್ಣರಂಜಿತ ಗಾಳಿಪಟ ಉತ್ಸವವನ್ನು ವೀಕ್ಷಿಸಿದರು.ರೋಟರಿ ಕ್ಲಬ್,ಟೀಮ್ ಮಂಗಳೂರು ತಂಡದಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 12ದೇಶಗಳ 22 ಮಂದಿ ಪ್ರತಿನಿಧಿಗಳು ತಮ್ಮ ವಿಶಿಷ್ಟವಾದ ಗಾಳಿಪಟಗಳನ್ನು ಕಡಲ ಕಿನಾರೆಯಲ್ಲಿ ತೇಲಿಬಿಟ್ಟು ಜನರನ್ನು ರಂಜಿಸಿದರು.


    ಶನಿವಾರ ಸಂಜೆ ಆರಂಭಗೊಂಡ ಈ ಉತ್ಸವದಲ್ಲಿ ಎಲ್ಲಾ ಗಾಳಿಪಟಗಳನ್ನು ಹಾರಿಸಲು ಕೆಲವೊಂದು ಸಮಸ್ಯೆಗಳು ಉಂಟಾಗಿದ್ದರೂ ರಾತ್ರಿ ವೇಳೆಗೆ ಉತ್ಸವಕ್ಕೆ ಬೆಳಕಿನ ಮೆರುಗಿ ನೀಡಿ ರಂಜಿಸಿದ್ದರು.ರವಿವಾರ ಈ ಸಮಸ್ಯೆಗಳನ್ನು ನಿವಾರಿಸಿ ಪಣಂಬೂರು ಕಡಲ ಕಿನಾರೆಯಲ್ಲಿ ರಂಗು ರಂಗಿನ ವಿಶೀಷ್ಟ ವಿನ್ಯಾಸದ ಗಾಳಿಪಟಗಳು ಅಪಾರ ಜನಾಕರ್ಷಣೆಗೆ ಪಾತ್ರವಾಯಿತು.


   ಈ ಬಾರಿಯೂ ಟೀಮ್ ಮಂಗಳೂರು ತಂಡ ಸ್ಥಳೀಯ ಸಾಂಸ್ಕೃತಿಕ ಸಂಕೇತಕಗಳ ಗಾಳಿಪಟಗಳನ್ನು ಹಾರಿಸಿ ತಮ್ಮ ವಿಶೇಷತೆಯನ್ನು ಮಗದೊಮ್ಮೆ ಪ್ರದರ್ಶಿಸಿದರು.ಕರಾವಳಿಯ ಯಕ್ಷಗಾನದ ಮೆರುಗನ್ನು ಹೊತ್ತ ವೇಷದ ಗಾಳಿಪಟ,ಕೇರಳದ ಕಥಕ್ಕಳಿಯ ಗಾಳಿಪಟ,ಜೊತೆಗೆ ಮೀನಿ ಆಕಾರದ ಹಕ್ಕಿಯ ಆಕಾರದ ಗಾಳಿಪಟಗಳು,ವಿದೇಶಿಯರ ದೈತ್ಯ ಆಕಾರದ ಜಲಚರಗಳು,ಡ್ರಾಗನ್ ಹಾಗೂ ಇತರ ಸಾಂಕೇತಿಕ ವಿನ್ಯಾಸದೊಂದಿಗೆ ಹಾರಿಸಿದ ಗಾಳಿಪಟಗಳು ಉತ್ಸವಕ್ಕೆ ವರ್ಣರಂಜಿತ ಮೆರುಗನ್ನು ತಂದು ಕೊಟ್ಟಿತು.ಈ ಬಾರಿ ನೈಟ್ ಕೈಟ್ ಫ್ಲೈಯಿಂಗ್ ಎನ್ನುವ ಮಾದರಿಯನ್ನು ಪ್ರಥಮ ಬಾರಿಗೆ ಮಂಗಳೂರು ಕಡಲ ಕಿನಾರೆಯಲ್ಲಿ ಪರಿಚಯಿಸಲಾಯಿತು.ಈ ಮಾದರಿಯಲ್ಲಿ ಉತ್ಸವದ ಆವರಣದಲ್ಲಿ ಇರಿಸಲಾಗಿದ್ದ ಗೂಡು ದೀಪಗಳನ್ನು ಬೆಳಗಿಸುವುದರೊಂದಿಗೆ ಚಾಲನೆ ನೀಡಲಾಯಿತು.ಗಾಳಿಪಟಕ್ಕೆ ಕೇಂದ್ರೀಕರಿಸಿ ಬೆಳಕನ್ನು ಹಾಯಿಸಿದಾಗ ರಾತ್ರಿ ಆಕಾಶದಲ್ಲಿ ಬೆಳಕನ್ನು ಪ್ರತಿಫಲಿಸುತ್ತಾ ಸಾಗುವ ಗಾಳಿಪಟ,ಎಲ್‌ಇಡಿ ಬಲ್ಬುಗಳನ್ನು ಹೊಂದಿದ ಬ್ಯಾಟರಿ ಅಳವಡಿಸಿದ ಗಾಳಿಪಟಗಳು ಜನಾಕರ್ಷಣೆಯ ಕೇಂದ್ರವಾಗಿತ್ತು.


ಫ್ರಾನ್ಸ್, ಆಸ್ರೇಲಿಯಾ, ಕುವೈಟ್, ನೆದರ್ಲೆಂಡ್, ಉಕ್ರೇನ್, ಇಟಲಿ, ಟರ್ಕಿ, ಜರ್ಮನಿ, ಕಾಂಬೋಡಿಯಾ,ಸಿಂಗಾಪುರ ಮೊದಲಾದ ದೇಶಗಳ ಪ್ರತಿನಿಧಿಗಳು ಹಾಗೂ ಭಾರತದ ಮಂಗಳೂರು ,ಹೈದರಾಬಾದ್.ಮಹಾರಾಷ್ಟ್ರದ ಸದಸ್ಯರು ಈ ಉತ್ಸವದಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News