ಕಾಲೇಜು ವಿದ್ಯಾರ್ಥಿನಿ ನಾಪತ್ತೆ
Update: 2016-01-17 21:48 IST
ಕಡಬ, ಜ.17. ಸಮೀಪದ ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿನಿ ಕಡಬ ಪಣೆಮಜಲು ನಿವಾಸಿ ಸಂಧ್ಯಾ(22) ಎಂಬಾಕೆ ಶನಿವಾರ ಕಾಲೇಜಿಗೆಂದು ತೆರಳಿದ್ದು, ಮನೆಗೂ ಬಾರದೆ ಕಾಲೇಜಿಗೂ ತೆರಳದೆ ನಾಪತ್ತೆಯಾಗಿರುವುದಾಗಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಳಿ-ಹಳದಿ ಮೈಬಣ್ಣ ಹೊಂದಿದ್ದು, ತುಳು ಹಾಗೂ ಕನ್ನಡ ಭಾಷೆಯನ್ನು ಮಾತನಾಡಬಲ್ಲಿ ಈಕೆಯನ್ನು ಕಂಡವರು ಕಡಬ ಠಾಣೆಯ 08251-260044ಗೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ತಿಳಿಸಬೇಕೆಂದು ಕೋರಲಾಗಿದೆ.