ಮಗನಿಂದ ತಂದೆಗೆ ಹಲ್ಲೆ
Update: 2016-01-17 21:54 IST
ಕಡಬ, ಜ.17. ಬೆಳಂದೂರು ಗ್ರಾಮದ ಪಾಣೆ ನಿವಾಸಿ ದುಗ್ಗಪ್ಪ ಗೌಡ(54) ಎಂಬವರಿಗೆ ಪುತ್ರ ಗೋಪಾಲ ಗೌಡ ಎಂಬವರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ನೆರೆಮನೆಗೆ ತೆರಳಬಾರದೆಂದು ಗೋಪಾಲ ಗೌಡರು ತಾಕೀತು ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದುಗ್ಗಪ್ಪ ಗೌಡರು ಕಡಬ ಠಾಣೆಗೆ ದೂರು ನೀಡಿದ್ದಾರೆ.