×
Ad

ನಾನು ಹುಟ್ಟಿದ್ದು ಪಾಕಿಸ್ತಾನದ ಕರಾಚಿಯಲ್ಲಿ: ಅಡ್ವಾಣಿ

Update: 2016-01-17 22:14 IST

ಉಡುಪಿ, ಜ.17: ನಾನು ಹುಟ್ಟಿದ್ದು ಪಾಕಿಸ್ತಾನದ ಕರಾಚಿಯಲ್ಲಿ. ಆದರೂ ನನಗೆ  ಬೆಂಗಳೂರಿನ ಬಗ್ಗೆ ಪ್ರೀತಿಯಿದೆ. ಯಾಕೆಂದರೆ ತುರ್ತುಪರಿಸ್ಥಿತಿಯ ಸಮಯದಲ್ಲಿ 19ತಿಂಗಳು ಬೆಂಗಳೂರಿನ ಜೈಲಿನಲ್ಲಿದ್ದೆ ಹೀಗೆಂದವರು ಮಾಜಿ ಉಪಪ್ರಧಾನಿ, ಬಿಜೆಪಿ ಧುರೀಣ ಎಲ್‌ಕೆ ಅಡ್ವಾಣಿ.
ಉಡುಪಿಯಲ್ಲಿ ಇಂದು ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು "ಹಿಂದಿನಿಂದಲೂ ನನಗೆ ಪೇಜಾವರ ಶ್ರೀಗಳ ಒಡನಾಟವಿದೆ. ನನಗೆ ಅವರ ಆಶೀರ್ವಾದವಿದೆ. ಮುಂದೆಯೂ ಅವರ ಆಶೀರ್ವಾದಬೇಕು.   ಶ್ರೀಗಳ ಐದನೆ ಪರ್ಯಾಯದಲ್ಲಿ ಭಾಗವಹಿಸಲು ಸಂತಸವಾಗುತ್ತಿದೆ. ಬಿಜೆಪಿ ಉಡುಪಿಯ ನಗರಸಭೆಯಲ್ಲಿ ಗೆಲ್ಲುವ ಮೂಲಕ ದಕ್ಷಿಣ ಭಾರತದಲ್ಲೇ ಮೊದಲ  ಗೆಲುವಿನ ಖಾತೆ ತೆರೆದಿತ್ತು. ಬಹುಮತ ಪಡೆದಿತ್ತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News