ಕಾಸರಗೋಡು : ಕೇರಳ ಸರಕಾರದ ಆಡಳಿತ ಭಾಷೆ ತಿದ್ದುಪಡಿ ಮಸೂದೆ ವಿರೋಧಿಸಿ ಹೋರಾಟ
ಕಾಸರಗೋಡು : ಕೇರಳ ಸರಕಾರದ ಆಡಳಿತ ಭಾಷೆ ತಿದ್ದುಪಡಿ ಮಸೂದೆ ವಿರೋಧಿಸಿ ಹೋರಾಟ ನಡೆಸಲು , ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲ ರನ್ನು ಒತ್ತಾಯಿಸಲು ಕಾಸರಗೋಡಿನಲ್ಲಿ ಆದಿತ್ಯವಾರ ನಡೆದ ಕನ್ನಡ ಸಮನ್ವಯ ಸಮಿತಿ ಮತ್ತು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಸಂಘದ ಸಭೆಯು ನಿರ್ಧಾರ ತೆಗೆದುಕೊಂಡಿದೆ.ಇದಕ್ಕಾಗಿ ನಿಯೋಗವೊಂದು ರಾಜ್ಯಪಾಲ ಮತ್ತು ಮುಖ್ಯಮಂತ್ರಿಯವರನ್ನು ಭೇಟಿಯಾಗಲು ತೀರ್ಮಾನಿಸಿದೆ.ಜಿಲ್ಲೆಯ ಜನಪ್ರತಿನಿಧಿಗಳು ಭಾಷಾ ಅಲ್ಪಸಂಖ್ಯಾಂತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಸರಕಾರ ಮಸೂದೆಗೆ ತಿದ್ದುಪಡಿ ತಂದಲ್ಲಿ ಕನ್ನಡಕ್ಕೆ ಉಳಿಗಾಲವಿಲ್ಲ . ೧೯೬೯ ರಲ್ಲಿ ಹೊರಡಿಸಿದ ಭಾಷಾ ಮಸೂದೆಯನ್ನು ತಿದ್ದುಪಡಿ ಮಾಡಬಾರದು. ಮಸೂದೆ ಗೆ ರಾಜ್ಯಪಾಲರು ಅಂಕಿತ ಹಾಕದಂತೆ ಒತ್ತಡ ಹೇರಬೇಕು, ಕನ್ನಡಿಗರ ಮೇಲಿನ ದಬ್ಬಾಳಿಕೆ ವಿರುದ್ದ ಜನವರಿ ೨೩ ರಂದು ಕಾಸರಗೋಡಿನಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಎಚ್ಚರಿಕೆ ನೀಡುವ ಕುರಿತು ತೀರ್ಮಾನಕ್ಕೆ ಬರಲಾಯಿತು. ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷ ಪುರುಷೋತ್ತಮ ಮಾಸ್ಟರ್, ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳುಕ್ಕರಾಯ, ಜಿಲ್ಲಾ ಪಂಚಾಯತ್ ಸದಸ್ಯ ಕೆ . ಶ್ರೀಕಾಂತ್ , ಗೋಪಾಲಕೃಷ್ಣ ಭಟ್, ಜಗನ್ನಾಥ ಶೆಟ್ಟಿ , ಆಯಿಷಾ ಪೆರ್ಲ , ಜೋಗೆಂದ್ರ ನಾಥ್, ಉಮೇಶ್ ಸಾಲಿಯಾನ್ ಉಪಸ್ಥಿತರಿದ್ದರು.