ಕಾಸರಗೋಡು : ಮಂಜೇಶ್ವರ ಗೋವಿಂದ ಪೈ ಸ್ಮಾರಕವಾಗಿ ನಿರ್ಮಿಸುವ ಗಿಳಿವಿಂಡು ಯೋಜನೆಯ ಪ್ರಗತಿ ಕುರಿತು ಸಭೆ
Update: 2016-01-17 23:03 IST
ಕಾಸರಗೋಡು : ಮಂಜೇಶ್ವರ ಗೋವಿಂದ ಪೈ ಸ್ಮಾರಕವಾಗಿ ನಿರ್ಮಿಸುವ ಗಿಳಿವಿಂಡು ಯೋಜನೆಯ ಪ್ರಗತಿ ಕುರಿತು ಅವಲೋಕನ ನಡೆಸಲು ಗೋವಿಂದ ಪೈ ಯವರ ನಿವಾಸದಲ್ಲಿ ಆದಿತ್ಯವಾರ ಸಭೆ ನಡೆಯಿತು. ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಂ . ವೀರಪ್ಪ ಮೊಯ್ಲಿ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು .
ಫೆಬ್ರವರಿ ೨೮ ರಂದು ಉದ್ಘಾಟನೆ ನೆರವೇರಿಸಲು ತೀರ್ಮಾನಿಸಲಾಯಿತು. ಕರ್ನಾಟಕ - ಕೇರಳ ಮುಖ್ಯಮಂತ್ರಿ, ಸಚಿವರನ್ನು ಆಹ್ವಾನಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. ಶೀಘ್ರ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಜಿಲ್ಲಾಧಿಕಾರಿ ಪಿ. ಎಸ್ ಮುಹಮ್ಮದ್ ಸಗೀರ್ , ಪ್ರೊ . ವಿವೇಕ್ ರೈ, ಡಿ. ಕೆ ಚೌಟ, ತೇಜೋಮಯ , ಕೆ. ಆರ್ ಜಯಾನಂದ , ಎಂ . ಜೆ ಕಿಣಿ , ಜಯಲಕ್ಷ್ಮಿ , ಡಾ. ರಮಾನಂದ ಬನಾರಿ ಮೊದಲಾದವರು
ಉಪಸ್ಥಿತರಿದ್ದರು.