ಮಂಗಳೂರು: H.I.F ನಿಂದ ಬ್ಲಡ್ ಡೊನೇಷನ್ ಕ್ಯಾಂಪ್
ಮಂಗಳೂರು: ಹೈಲಾಂಡ್ ಇಸ್ಲಾಮಿಕ್ ಫೊರಂನ (H.I.F) ವತಿಯಿಂದ ಬ್ಲಡ್ ಡೊನೇಷನ್ ಕ್ಯಾಂಪ್ ಹೈಲಾಂಡ್ ಎಡುಕೇಷನ್ ಕಲ್ಚರಲ್ ಸೆಂಟರ್ನಲ್ಲಿ ಆದಿತ್ಯವಾರದಂದು ನಡೆಯಿತು. ಕಾರ್ಯಕ್ರಮದಲ್ಲಿಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಪೋರೇಟರ್ ಅಬ್ದುಲ್ ರವುಫ್ ರಕ್ತದಾನವು ಶ್ರೇಷ್ಟವಾಗಿದೆ. ಇಂತಹ ಕಾರ್ಯಕ್ರಮಪರಸ್ಪರ ಕೋಮುಸೌಹಾರ್ದತೆಯನ್ನು ಬೆಳಸಬಹುದು. ಇದಕ್ಕೆ ಉದಾಹರನೆಯಾಗಿ ಇಂದು ಅನೇಕ ಅನ್ಯಮತಿಯರು ರಕ್ತದಾನವನ್ನು ನೀಡಿದರು ಎಂದರು. ಕೆ.ಎಂ.ಸಿ. ಯ ದಾಕ್ಟರ್ ಮೀರಾ ರಕ್ತದಾನದ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು. ಮತ್ತೋರ್ವ ಅತಿಥಿ ಮೌಲಾನ ತಾಯಿರವರ ಇಸ್ಲಾಮಿನಲ್ಲಿ ಸಮಾಜ ಸೇವೆಗೆಇರುವ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ (H.I.F)ನ ಅಧ್ಯಕ್ಷ ಮೊಹಮ್ಮದ್ ರಿಜ್ವಾನ್ ಪ್ರತೀ ವರ್ಷ ಎರಡು ಸಲ ಇದೇ ಮಸೀದಿಯ ಆವರಣದಲ್ಲಿ ರಕ್ತ ದಾನ ಶಿಬಿರವನ್ನು ನಡೆಸಲಾಗವುದು. ಸುಮಾರು 600 ಕ್ಕೊ ಅಧಿಕ ಯೊನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಗಿದೆ ಎಂದರು. ಕೆ.ಎಂ.ಸಿ. ಯ ಡಾಕ್ಟರ್ ಸ್ಮಿತ ಮಾತನಾಡಿ ಮಸೀದಿಯ ಆವರಣದಲ್ಲಿ ಪ್ರಥಮ ಬಾರಿಗೆ ತಮ್ಮ ರಕ್ತದಾನ ಶಿಬಿರದ ಅನುಭವವನ್ನು ತಿಳಿಸುತ್ತಾ ಮಸೀದಿ ಇಂತಹ ಕಾರ್ಯಕ್ರಮಗಳಿಗೆ ಉಪಯೋಗಿಸವುದು ಶ್ಲಾಗನಿಯವಾಗಿದೆ. ಎಲ್ಲಾ ಮಸೀದಿ ಮಂದಿರಗಳು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲು ಮಸ್ಜಿದುಲ್ ಎಹ್ಸಾನ್ ಮಾದರಿಯಾಗಲಿ ಎಂದು ಹಾರೈಹಿಸಿದರು. ಆಶಿಕ್ ಕುಕ್ಕಾಜೆ ಹಾಫೀಸ್ ಉಸ್ತಾದ್ ಕಿರಾತ್ ಪಟಿಸಿದರು.