ಪೇಜಾವರ ಪರ್ಯಾಯ: ಅಡ್ವಾಣಿ ಉಡುಪಿಗೆ ಆಗಮನ
ಉಡುಪಿ, ಜ.17: ಉಡುಪಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಐತಿ ಹಾಸಿಕ ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಇಂದು ಉಡುಪಿಗೆ ಆಗಮಿಸಿದ್ದಾರೆ.
ಝೆಡ್+ ಕೆಟಗರಿಯ ಭದ್ರತೆ ಹೊಂದಿರುವ ಎಲ್.ಕೆ.ಅಡ್ವಾಣಿ ಮಂಗಳೂರು ವಿಮಾನ ನಿಲ್ದಾಣದಿಂದ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಉಡುಪಿಯ ಪ್ರವಾಸಿ ಬಂಗಲೆಗೆ ಆಗಮಿ ಸಿದರು. ಈ ಸಂದರ್ಭ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಪೇಜಾವರ ಸ್ವಾಮೀಜಿಗೂ ತನಗೂ ಅವಿನಾಭಾವ ಸಂಬಂಧ ಇದೆ. ಅವರ 5ನೆ ಪರ್ಯಾಯದಲ್ಲಿ ಭಾಗವಹಿಸು ತ್ತಿರುವುದು ಹೆಮ್ಮೆ ಎನಿಸುತ್ತದೆ ಎಂದರು.
ಉಡುಪಿಗೆ ಆಗಮಿಸುವಾಗ ನನಗೆ ತಟ್ಟನೆ ನೆನಪಿಗೆ ಬರುವುದು ಇಲ್ಲಿನ ಪುರಸಭೆಯಲ್ಲಿ ಬಿಜೆಪಿಯ ವಿಜಯ. ಈ ವಿಜಯವು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಸ್ತಿತ್ವ ನೀಡಿತ್ತು. ಹಾಗೆ ಅದನ್ನು ನಾವು ಉತ್ತಮ ಪುರಸಭೆ ಯನ್ನಾಗಿ ಮಾಡಿದ್ದೇವೆ. ಬಿಜೆಪಿಯನ್ನು ನಾವು ಯಾವ ಉದ್ದೇಶಕ್ಕೆ ಹುಟ್ಟು ಹಾಕಿ ದ್ದೇವೆಯೋ ಅದೇ ಉದ್ದೇಶವನ್ನು ಪಕ್ಷ ಈಡೇರಿಸುತ್ತ ಜನರ ಸೇವೆ ಮಾಡುತ್ತಿದೆ ಎಂದು ಅವರು ತಿಳಿಸಿದರು.
ನನ್ನ ಹುಟ್ಟೂರು ಕರಾಚಿಯ ಬಗ್ಗೆ ನನಗೆ ಯಾವ ಭಾವನೆ ಇದೆಯೋ ಅದೇ ಭಾವನೆ ನನಗೆ ಬೆಂಗಳೂರಿನ ಬಗ್ಗೆಯೂ ಇದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 19 ತಿಂಗಳ ಕಾಲ ನಾನು ಬೆಂಗಳೂರಿನಲ್ಲಿರುವ ಕೇಂದ್ರ ಕಾರಾ ಗೃಹದಲ್ಲಿ ಇದ್ದೆ ಎಂದು ಅವರು ಆ ದಿನಗಳನ್ನು ನೆನಪಿಸಿಕೊಂಡರು.
ಈ ಸಂದರ್ಭ ಸಚಿವ ವಿನಯ ಕುಮಾರ್ ಸೊರಕೆ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಎಸ್ಪಿ ಅಣ್ಣಾಮಲೈ ಉಪಸ್ಥಿತರಿದ್ದರು.