ಜ.20ರಿಂದ ಲೋಕಾಯುಕ್ತ ಅಧಿಕಾರಿಗಳ ಭೇಟಿ
Update: 2016-01-18 00:30 IST
ಮಂಗಳೂರು, ಜ.17: ಮಂಗಳೂರು ಲೋಕಾಯುಕ್ತ ವಿಭಾಗದ ಅಧಿಕಾರಿಗಳು ಜ.20ರಂದು ಪೂರ್ವಾಹ್ನ 11ರಿಂದ 1ರವರೆಗೆ ಮೂಡುಬಿದಿರೆ ವಿಶೇಷ ತಹಶೀ ಲ್ದಾರರ ಕಚೇರಿ, ಜ.23ರ ಪೂರ್ವಾಹ್ನ 11ರಿಂದ 1ರವರೆಗೆ ಬೆಳ್ತಂಗಡಿ ತಾಲೂಕು ಕಚೇರಿ, ಅಪರಾಹ್ನ 3ರಿಂದ ಸಂಜೆ 4:30ರವರೆಗೆ ಬಂಟ್ವಾಳದ ಸರಕಾರಿ ಅತಿಥಿ ಗೃಹದಲ್ಲಿ, ಜ.28ರಂದು ಪೂರ್ವಾಹ್ನ 11 ರಿಂದ ಮಧ್ಯಾಹ್ನ 1ರವರೆಗೆ ಸುಳ್ಯ ತಾಲೂಕು ಕಚೇರಿ, ಅಪರಾಹ್ನ 3ರಿಂದ ಸಂಜೆ 4:30ರವೆರೆಗೆ ಪುತ್ತೂರು ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿ ಸಲಿದ್ದಾರೆ. ಮಾಹಿತಿಗಾಗಿ ಮೊ.ಸಂ.: 9480032283/ 9448012324/ 0824-2429197ನ್ನು ಸಂಪರ್ಕಿ ಸಬಹುದು ಎಂದು ಪ್ರಕಟನೆ ತಿಳಿಸಿದೆ.