×
Ad

ಕಿನ್ನಿಗೋಳಿ: ಮಹಾಮ್ಮಯಿ ದೇವಸ್ಥಾನದಲ್ಲಿ ಕಳವು

Update: 2016-01-18 09:47 IST

ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಎಂಬಲ್ಲಿರುವ ದೇವಸ್ಥಾನದಲ್ಲಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನದಲ್ಲಿದ್ದ ದೇವರ ಸ್ವರ್ಣಾಭರಣ ಹಾಗೂ ಬೆಳ್ಳಿಯಾಭರಣ ಕಳವು ನಡೆದ ಬಗ್ಗೆ ವರದಿಯಾಗಿದೆ. ರವಿವಾರ ರಾತ್ರಿ ಘಟನೆ ನಡೆದಿದೆ. ಮುಲ್ಕಿ ಠಾಣೆ ಪೊಲೀಸರು, ಶ್ವಾನ ದಳ, ಬೆರಳಚ್ಚು ತಙ್ಞರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಸಚಿವ ಅಭಯ ಚಂದ್ರ ಜೈನ್ ಭೇಟಿ ನೀಡಿ ಎಸಿಪಿ ಮದನ್ ಗೌನ್ಕರ್ ರನ್ನು ತರಾಟೆಗೆ ತೆಗೆದುಕೊಂಡರು. 
ಕೃತ್ಯದಲ್ಲಿ ಭಾಗಿಯಾದವರನ್ನು ಶೀಘ್ರವಾಗಿ ಬಂಧಿಸಲು ಸೂಚಿಸಿದ್ದಾರೆ. ದೇವಸ್ಥಾನಕ್ಕೆ ಸಿಸಿ ಕ್ಯಾಮೆರಾ ಅಳವಡಿಸಲು ಈ ಸಂದರ್ಭ ಸೂಚಿಸಿದ್ದು, ಶಾಸಕರ ನಿಧಿಯಿಂದ ಸಿಸಿ ಟಿವಿ ಅಳವಡಿಕೆಯ ಭರವಸೆ ನೀಡಿದ್ದಾರೆ. 
ಕಳವು ಪ್ರಕರಣದಿಂದ ಸುಮಾರು 2.5 ಲಕ್ಷ ರೂ. ಮೌಲ್ಯದ ನಗ ನಗದು ದೋಚಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News