×
Ad

ನಕ್ಕು ನಗಿಸುವ ‘ಕಾರ್ಟೂನ್ ಹಬ್ಬ’ಕ್ಕೆ ಚಾಲನೆ

Update: 2016-01-18 09:59 IST

ಉಡುಪಿ, ಜ.17: ಪೇಜಾ ವರ ಪರ್ಯಾಯ ಪ್ರಯುಕ್ತ ‘ಕಾರ್ಟೂನು ಕುಂದಾಪ್ರ’ದ ವತಿಯಿಂದ ದೊಡ್ಡಣಗುಡ್ಡೆ ಡಾ. ಎ.ವಿ.ಬಾಳಿಗಾ ಚಾರಿಟೀಸ್ ಸಹಭಾಗಿತ್ವದಲ್ಲಿ ಉಡುಪಿ ಶೋಕ ಮಾತಾ ಚರ್ಚ್ ಆವರಣದಲ್ಲಿ ಹಮ್ಮಿ ಕೊಳ್ಳಲಾದ ಎರಡು ದಿನಗಳ ಕಾರ್ಟೂನು ಹಬ್ಬಕ್ಕೆ ಇಂದು ಚಾಲನೆ ನೀಡಲಾಯಿತು.

ಕಾರ್ಟೂನ್ ಹಬ್ಬವನ್ನು ಮಣಿಪಾಲ ಎಂಐಟಿಯ ನಿರ್ದೇಶಕ ಡಾ.ಜಿ.ಕೆ. ಪ್ರಭು ಉದ್ಘಾಟಿಸಿದರು. ಶೋಕಮಾತಾ ಇಗರ್ಜಿಯ ಧರ್ಮಗುರು ರೆ.ಫಾ. ಫ್ರೆಡ್ ಮಸ್ಕರೇನ್ಹಸ್ ಆಶೀರ್ವಚನ ನೀಡಿದರು. ಲೇಖಕಿ ವನಿತಾ ಪೈ, ಉಡುಪಿ ಅದಿತಿ ಆರ್ಟ್ ಗ್ಯಾಲರಿಯ ಡಾ.ಕಿರಣ್ ವಿ.ಆಚಾರ್ಯ, ಮಾನಸಿಕ ತಜ್ಞ ಡಾ.ಪಿ.ವಿ.ಭಂಡಾರಿ, ವ್ಯಂಗ್ಯ ಚಿತ್ರಕಾರರಾದ ಜೇಮ್ಸ್ ವಾಜ್, ಸತೀಶ್ ಆಚಾರ್ಯ, ಜೀವನ್ ಶೆಟ್ಟಿ ಉಪಸ್ಥಿತರಿದ್ದರು. ಬಿಸಿನೆಸ್ ಇಂಡಿಯಾದ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಮಾತನಾಡಿ, ನರೇಂದ್ರ ಮೋದಿ ಹಾಗೂ ಸಿದ್ದರಾಮಯ್ಯ ಸರಕಾರದ ವಿವಿಧ ಯೋಜನೆಗಳು ವ್ಯಂಗ್ಯಚಿತ್ರಕಾರರಿಗೆ ಒಂದು ರೀತಿಯ ಹಬ್ಬವಾಗಿದೆ. ಸಮಾಜದಲ್ಲಿ ಆಗುವ ಎಲ್ಲ ರೀತಿ ಯ ನಕಾರಾತ್ಮಕ ಬೆಳವಣಿಗೆಯಿಂದ ಒಳ್ಳೆಯ ಕಾರ್ಟೂನ್‌ಗಳು ಮೂಡಿಬರುತ್ತದೆ ಎಂದರು. ಹವ್ಯಾಸಿ ಕಾರ್ಟೂನಿಸ್ಟ್ ರಾಮಕೃಷ್ಣ ಹೇರ್ಳೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಹಬ್ಬದಲ್ಲಿ ವ್ಯಂಗ್ಯಚಿತ್ರಕಾರರಾದ ಪಿ.ಮುಹಮ್ಮದ್, ಸತೀಶ್ ಆಚಾರ್ಯ, ಪಂಜು ಗಂಗೊಳ್ಳಿ, ಜೇಮ್ಸ್ ವಾಜ್, ಜಯರಾಮ್ ಉಡುಪ, ರಾಮಕೃಷ್ಣ ಹೇರ್ಳೆ, ಕೇಶವ ಸಸಿಹಿತ್ಲು, ಜೀವನ ಶೆಟ್ಟಿ, ಸಂತೋಷ್ ಸಸಿಹಿತ್ಲು, ರವಿರಾಜ್ ಹಾಲಂಬಿ, ಸುಬ್ರಹ್ಮಣ್ಯ ಎಂ., ಚಂದ್ರ ಗಂಗೊಳ್ಳಿ, ಗೋಪಿ ಹಿರೆಬೆಟ್ಟು, ಜಿಬಿ ಕಲೈಕಾರ್, ಗಣೇಶ್ ಹೆಬ್ಬಾರ್, ಚಂದ್ರಶೇಖರ್ ಶೆಟ್ಟಿಯವರ ಸುಮಾರು 120 ಕಾರ್ಟೂನ್‌ಗಳು ಪ್ರದರ್ಶಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News