×
Ad

ಉದ್ಯಾವರ: ಸಾಮೂಹಿಕ ವಿವಾಹ, ಸೌಹಾರ್ದ ಸಭಾ ಕಾರ್ಯಕ್ರಮ

Update: 2016-01-18 10:03 IST

ಕುಂಜತ್ತೂರು, ಜ.17: ಉದ್ಯಾವರ ಮಖಾಂ ಉರೂಸ್ ಪ್ರಯುಕ್ತ ಸಾಮೂಹಿಕ ವಿವಾಹ ಹಾಗೂ ಸೌಹಾರ್ದ ಸಭಾ ಕಾರ್ಯಕ್ರಮ ರವಿವಾರ ಜರಗಿತು. ಬೆಳಗ್ಗೆ ಉದ್ಯಾವರ ಸಾವಿರ ಜಮಾಅತ್ ಮಸೀದಿ ಅಂಗಣದಲ್ಲಿ ಎ.ಕೆ.ಮೋನು ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಶಾಸಕ ಪಿ.ಬಿ.ಅಬ್ದುರ್ರಝಾಕ್ ಉದ್ಘಾಟಿಸಿ ಮಾತನಾಡಿದರು. ತೂಮಿನಾಡಿನ ಇಸ್ಮಾಯೀಲ್ ಎಂ.ಪಿ. ಪ್ರಾಯೋಜಕತ್ವದಲ್ಲಿ ಬಡ ಜೋಡಿಗಳ ಸಾಮೂಹಿಕ ವಿವಾಹ ಜುಮಾ ಮಸೀದಿಯಲ್ಲಿ ನೆರವೇರಿತು. ಜಮಾಅತ್ ಅಧ್ಯಕ್ಷ ಅತಾವುಲ್ಲ ತಂಙಳ್ ಸೌಹಾರ್ದ ಸಂದೇಶವನ್ನು ನೀಡಿದರು. ಅನಿಸ್ ಸಿದ್ದೀಕ್ ಅಲ್ ಕಾಮಿಲ್ ಮುಖ್ಯ ಭಾಷಣ ಮಾಡಿದರು.

ಉದ್ಯಾವರ ದೇವಳದ ಪದಾಧಿಕಾರಿಗಳಾದ ಡಾ.ಜಯಪಾಲ ಶೆಟ್ಟಿ, ಶ್ರೀ ಸುಕುಮಾರ ಶೆಟ್ಟಿ, ಮಂಜೇಶ್ವರ ಠಾಣಾಧಿಕಾರಿ ಪಿ.ಪ್ರಮೋದ್, ದಯಾಕರ ಮಾಡ, ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಯೂನುಸ್ ತಳಂಗರ, ಅಬ್ದುಲ್ ಹಮೀದ್ ಹೊಸಂಗಡಿ ಮೊದಲಾದವರು ಮಾತನಾಡಿದರು.

ಜ.18ರಂದು ಮಗ್ರಿಬ್ ನಮಾಝ್ ಬಳಿಕ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ದುಆಗೈಯುವರು. ರಾತ್ರಿ 8ಕ್ಕೆ ಅಸ್ಸೈಯದ್ ಇಬ್ರಾಹೀಮುಲ್ ಖಲೀಲುಲ್ ಬುಖಾರಿ ಕಡಲುಂಡಿ ತಂಙಳ್ ನೇತೃತ್ವದಲ್ಲಿ ದ್ಸಿಕ್ರ್ ಮಜ್ಲಿಸ್‌ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News