×
Ad

ಆಂಧ್ರಪ್ರದೇಶದಲ್ಲಿ ಅಪಘಾತ: ಕಾಸರಗೋಡು ಮೂಲದ ಆರು ಮಂದಿ ಮೃತ್ಯು

Update: 2016-01-18 11:18 IST

ಕಾಸರಗೋಡು : ಕಾರು ರಸ್ತೆ ಬದಿಯ ಮೋರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾಸರಗೋಡು ಮೂಲದ   ಐವರು ಸೇರಿದಂತೆ ಒಟ್ಟು ಆರು  ಮಂದಿ ಮೃತಪಟ್ಟ ಘಟನೆ ಇಂದು ಮುಂಜಾನೆ  ಆಂಧ್ರಪ್ರದೇಶ ದಲ್ಲಿ ನಡೆದಿದೆ.
ಮೃತಪಟ್ಟವರು ದೇಲಂಪಾಡಿ ನಿವಾಸಿಗಳೆಂದು ಪ್ರಾಥಮಿಕ   ಮಾಹಿತಿಯಿಂದ   ತಿಳಿದುಬಂದಿದೆ.

ರಾಬಿನ್ , ಅವರ ಪತ್ನಿ ಬಿಸ್ಮೊಲ್ , 4 ತಿಂಗಳ  ಮಗು , ತಂದೆ ದೇವಸ್ಯ , ತಾಯಿ  ತ್ರೆಷ್ಯಮ್ಮ, ಚಾಲಕ ಪವನ್  ಮೃತಪಟ್ಟ ವರು ಎಂದು ಗುರುತಿಸಲಾಗಿದೆ. 

ಕಾರು ಸಂಪೂರ್ಣ  ನಜ್ಜುಗುಜ್ಜಾಗಿದೆ.  ಕೊಟ್ಟಾಯಂ ಗೆ ತೆರಳಿ  ಅಲ್ಲಿಂದ  ಆಂಧ್ರ ಪ್ರದೇಶಕ್ಕೆ  ತೆರಳುತ್ತಿದ್ದಾಗ  ಈ  ಘಟನೆ  ನಡೆದಿದೆ ಎಂದು ತಿಳಿದುಬಂದಿದೆ. 
ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News