ಕಾರ್ಕಳ ಪುರಸಭೆಗೆ "ಕ್ಲಿನ್ ಇಂಡಿಯಾ ಜನರಲ್- 2016" ಪ್ರಶಸ್ತಿ
ಕಾರ್ಕಳ ಪುರಸಭೆಗೆ "ಕ್ಲಿನ್ ಇಂಡಿಯಾ ಜನರಲ್- 2016" ಕಾರ್ಕಳ ಮಹಾರಾಷ್ಟ್ರದ ಮುಂಬೈ ಘೋರೆಗಾವ್ ವರ್ಚುವಲ್ ಇನ್ಪೋ ಸಿಸ್ಟಂಸ್ ಪ್ರೈ.ಲಿ.ನಿಂದ ಕಾರ್ಕಳ ಪುರಸಭೆಗೆ "ಕ್ಲಿನ್ ಇಂಡಿಯಾ ಜನರಲ್- 2016" ಪ್ರಶಸ್ತಿ ಲಭಿಸಿದೆ. ಕಾರ್ಕಳ ಪುರಸಭೆ ಅಧ್ಯಕ್ಷೆ ರೆಹಮತ್ ಎನ್ ಶೇಖ್ ಮತ್ತು ಮುಖ್ಯಾಧಿಕಾರಿ ರಾಯಪ್ಪ ಅವರು ಜ. 22 ರಂದು ಮುಂಬೈ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯಲಿರುವ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಿಲೇವಾರಿ ವಿಧಾನದ ಬಗ್ಗೆ ಕೈಗೊಂಡ ಕ್ರಮಗಳು ಹಾಗೂ ಯಶಸ್ಸಿನ ಕುರಿತಂತಹ ಸಾಕ್ಷ್ಯಚಿತ್ರವನ್ನು ಮಂಡಿಸಲಾಗಿದ್ದು ಆ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಬಾಜನವಾಗಿದೆ.
ನವೆಂಬರ್‌ನಲ್ಲಿ ಪ್ರಶಸ್ತಿ : ಕಾರ್ಕಳ ಪುರಸಭೆಗೆ ಕಳೆದ ನ.27ರಂದು ಘನತ್ಯಾಜ್ಯ ನಿರ್ವಹಣೆಯಲ್ಲಿ ಅಂತರಾಷ್ಟ್ರೀಯ "ಐಕಾನ್ ಎಸ್‌ಡಬ್ಲ್ಯೂಎಂ-2015, ಎಕ್ಸಲೆಂಟ್ ಪೇಪರ್ ಅವಾರ್ಡ್" ಲಭಿಸಿತ್ತು. ಬೆಂಗಳೂರಿನ ಇಂಡಿಯನ್ ಇನ್ಸ್‌ಸ್ಟ್ಯೂಟ್ ಆಫ್ ಸೈಯನ್ಸ್‌ನಲ್ಲಿ ಮೂರು ದಿನಗಳ ಕಾಲ ನಡೆದ ಕಾರ್ಯಗಾರದಲ್ಲಿ ಒಟ್ಟು 22 ರಾಷ್ಟ್ರಗಳು ಹಾಗೂ ಭಾರತದಿಂದ 480 ಕೈಗಾರಿಕಾ ಸಂಸ್ಥೆಗಳು ಭಾಗವಹಿಸಿದ್ದವು. ಅಲ್ಲಿ ಘನತ್ಯಾಜ್ಯ ನಿರ್ವಹಣಾ ಹಾಗೂ ಎರೆಹುಳು ಗೊಬ್ಬರ ನಿರ್ವಹಣೆ ಕುರಿತಂತೆ ಈ ಪ್ರಶಸ್ತಿಯನ್ನು ಕಾರ್ಕಳ ಪುರಸಭೆ ಗಿಟ್ಟಿಸಿಕೊಂಡಿತ್ತು. ಕರ್ನಾಟಕ ರಾಜ್ಯದಲ್ಲಿರುವ ಪುರಸಭೆಗಳ ಪೈಕಿ ಕಾರ್ಕಳ ಪುರಸಭೆ ಅಗ್ರ ಸ್ಥಾನವನ್ನು ಅಲಂಕರಿಸಿಕೊಂಡಿದೆ.
ರೆಹಮತ್ ಎನ್ ಶೇಖ್ ರಾಯಪ್ಪ