×
Ad

ಕಲ್ಲಡ್ಕ: ಹುಬ್ಬುನ್ನೆಬಿ ಅಭಿಯಾನದ ಅಂಗವಾಗಿ ಪ್ರವಾದಿ(ಸ.ಅ.) ಜೀವನ ಮತ್ತು ಸಂದೇಶ" ಕಾರ್ಯಕ್ರಮ

Update: 2016-01-18 23:09 IST

ಕಲ್ಲಡ್ಕ: ಆಲ್‌ಇಂಡಿಯಾ ಇಮಾಮ್ಸ್‌ ಕೌನ್ಸಿಲ್‌ ದ.ಕ. ಜಿಲ್ಲೆ ಮತ್ತು ಪಾಪ್ಯುಲರ್ ಫ್ರೆಂಟ್‌ಆಫ್‌ಇಂಡಿಯಾ ಬೋಳಂತೂರು ವಲಯಇದರ ವತಿಯಿಂದ ಹುಬ್ಬುನ್ನೆಬಿ ಅಭಿಯಾನದ ಅಂಗವಾಗಿ ಪ್ರವಾದಿ(ಸ.ಅ.) ಜೀವನ ಮತ್ತು ಸಂದೇಶ" ಕಾರ್ಯಕ್ರಮವು ಬೋಳಂತೂರು ಎನ್.ಸಿ.ರೋಡಿನಲ್ಲಿ ನಡೆಯಿತು.


ಆಲ್‌ಇಂಡಿಯಾಇಮಾಮ್ಸ್‌ಕೌನ್ಸಿಲ್‌ನ ರಾಜ್ಯ ಉಪಾಧ್ಯಕ್ಷ  ಸಯ್ಯಿದ್‌ ಇಬ್ರಾಹೀಮ್‌ ಅಲ್ ಹಾದಿ ತಂಙಳ್ ಆತೂರುಕಾರ್ಯಕ್ರಮವನ್ನು ಉದ್ಘಾಟಿಸಿದರು.ಪಾಪ್ಯುಲರ್ ಫ್ರೆಂಟ್‌ಆಫ್‌ಇಂಡಿಯಾಕಲ್ಲಡ್ಕ ಡಿವಿಷನ್‌ಅಧ್ಯಕ್ಷಅಬೂಬಕ್ಕರ್ ಸಿದ್ದಿಕ್ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಕ್ರಿಯೇಟಿವ್ ಪೌಂಡೇಷನ್ ಸಂಚಾಲಕ ಅನ್ವರ್ ಸಾದಾತ್ ಮುಖ್ಯ ಪ್ರಭಾಷಣ ಮಾಡಿದರು.ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ.ಜಿಲ್ಲಾ ಸಮಿತಿ ಸದಸ್ಯಅಶ್ರಫ್ ಮಂಚಿ, ಪಾಪ್ಯುಲರ್ ಫ್ರೆಂಟ್‌ಆಫ್‌ಇಂಡಿಯಾ ಬಂಟ್ವಾಳ ತಾಲೂಕುಅಧ್ಯಕ್ಷಝಕರಿಯಾ ಗೋಳ್ತಮಜಲು, ಗೋಳ್ತಮಜಲು ಪಂಚಾಯತ್ ಸದಸ್ಯಯೂಸುಫ್‌ಕಲ್ಲಡ್ಕ, ಕ್ಯಾಂಪಸ್ ಫ್ರಂಟ್‌ಆಫ್‌ಇಂಡಿಯಾ ಮಂಚಿ ವಲಯ ಕಾರ್ಯದರ್ಶಿ ಅಹ್ಮದ್‌ಕಬೀರ್, ಬೋಳಂತೂರು ಶಾಲಾಭಿವೃದ್ಧಿ ಸಮಿತಿ ಸದಸ್ಯ ಮಹಮ್ಮದ್, ಪಿ.ಎಪ್.ಐ ಸದಸ್ಯ ಸಾಹುಲ್ ಹಮೀದ್ ಬೋಳಂತೂರು ಮೊದಲಾದವರು ಉಪಸ್ಥಿತರಿದ್ದರು.
ತಪ್ಸೀರ್‌ಕಲ್ಲಡ್ಕ ಸ್ವಾಗತಿಸಿದರು. ಅಶ್ರಫ್ ಗೊಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.ಅಶ್ರಫ್ ಬೋಳಂತೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News