ಮಕ್ಕಳ ಪ್ರತಿಭಾ ಕಾರ್ಯಕ್ರಮ
Update: 2016-01-18 23:39 IST
ಬಂಟ್ವಾಳ, ಜ.18: ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯ ಅಲ್ ಮದ್ರಸತುಲ್ ಇರ್ಶಾದಿಯ್ಯೆ ಮದ್ರಸದಲ್ಲಿ ಮೀಲಾದುನ್ನಬಿ ಹಾಗೂ ಮಕ್ಕಳ ಪ್ರತಿಭಾ ಸಮಾರಂಭ ಇತ್ತೀಚೆಗೆ ನಡೆಯಿತು. ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ನಿರ್ವಹಣಾ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಸಖಾಫಿ ಮಾತನಾಡಿದರು.
ಈ ಸಂದರ್ಭ ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ, ಮಾಣಿ ಸೆಂಟರ್ ಎಸ್‌ವೈಎಸ್ ನಾಯಕ ಸುಲೈಮಾನ್ ಸೂರಿಕುಮೇರು, ಮದ್ರಸ ಅಧ್ಯಾಪಕ ನಝೀರ್ ಅಮ್ಜದಿ ಸರಳಿಕಟ್ಟೆ, ಅಬೂಬಕರ್ ಸಅದಿ ಸರಳಿಕಟ್ಟೆ, ಅಧ್ಯಾಪಕ ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿ ಉಪಸ್ಥಿತರಿದ್ದರು. ಕುಂದಾಪುರದ ಹಸನ್ ಗುಲ್ವಾಡಿ ಹಾಗೂ ಹುಸೈನ್ ಗುಲ್ವಾಡಿ ಬುರ್ದಾ ಕೀರ್ತನೆ ಹಾಡಿದರು. ಸಂಶುದ್ದೀನ್ ಗಡಿಯಾರ ಕಾರ್ಯಕ್ರಮ ನಿರೂಪಿಸಿದರು.