ಅಕ್ರಮ ಗೋಸಾಗಾಟದ ವಾಹನ ಪಲ್ಟಿ

Update: 2016-01-18 18:41 GMT

ಮೂಡುಬಿದಿರೆ, ಜ.18 : ಇಂಡಿಗೋ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿರುವುದನ್ನು ಖಚಿತ ಮಾಹಿತಿ ಮೇರೆಗೆ ಬೆನ್ನತ್ತಿದ ಪೊಲೀಸರು ವಾಹನ ಸಹಿತ 3 ದನಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ಬೆಳಗ್ಗೆ 7ಗಂಟೆಗೆ ಆಲಂಗಾರಿನಲ್ಲಿ ನಡೆದಿದೆ. ಬೆಳುವಾಯಿಯಿಂದ ಮೂಡುಬಿದಿರೆ ಕಡೆಗೆ ದನಗಳನ್ನು ಸಾಗಿಸುತ್ತಿದ್ದಾಗ ಪೊಲೀಸರು ಬೆನ್ನತ್ತಿಕೊಂಡು ಬಂದುದನ್ನು ಕಂಡ ವಾಹನ ಚಾಲಕ ಅತೀ ವೇಗದಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ಕಳಕೊಂಡು ಆಲಂಗಾರು ಜಂಕ್ಷನ್‌ನಲ್ಲಿ ಪಲ್ಟಿ ಹೊಡೆಯಿತು. ಈ ವೇಳೆ ವಾಹನದಲ್ಲಿದ್ದವರು ತಪ್ಪಿಸಿಕೊಂಡಿದ್ದಾರೆ. ಬಳಿಕ ಪೊಲೀಸರು ವಾಹನದಲ್ಲಿದ್ದ ಗೋವುಗಳ ಸಹಿತ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 4 ವರ್ಷದ ಬಳಿಕ ನಾಪತ್ತೆ ದೂರು ದಾಖಲುಉಳ್ಳಾಲ, ಜ.18: ಉಳ್ಳಾಲದ ಅಕ್ಕರೆಕೆರೆ ನಿವಾಸಿ ಅಬ್ದುಲ್ ನಾಸಿರ್ (37) ಎಂಬವರು 2011ರಿಂದ ಕಾಣೆಯಾಗಿದ್ದು, ಈ ಬಗ್ಗೆ ನಾಲ್ಕು ವರ್ಷಗಳ ಬಳಿಕ ಆತನ ಸಹೋದರ ಮುಹಮ್ಮದ್ ಇಕ್ಬಾಲ್ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಸಿರ್ ಆಗಾಗ ಮನೆ ಬಿಟ್ಟು ಹೋಗುವ ಚಾಳಿ ಹೊಂದಿದ್ದು, 2009ರಲ್ಲೂ ಮನೆಬಿಟ್ಟು ಹೋದಾತ 2 ವರ್ಷ ಕಳೆದ ಬಳಿಕ 2011ರಲ್ಲಿ ವಾಪಸಾಗಿದ್ದ. ಮತ್ತೆ ಅದೇ ವರ್ಷ ಯಾರಲ್ಲೂ ಹೇಳದೆ ನಾಪತ್ತೆಯಾಗಿದ್ದು, ಮರಳಿ ಬರುವನೆಂದು ಮನೆಮಂದಿ ಭರವಸೆಯಿಂದಿದ್ದರೂ ನಾಲ್ಕು ವರ್ಷಗಳಾದರೂ ಬಾರದೇ ಇದ್ದುದರಿಂದ ದೂರು ನೀಡಲಾಗಿದೆ.ಸಚಿವ ಖಾದರ್ ಪ್ರವಾಸಮಂಗಳೂರು, ಜ.18: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಜ.19ರಂದು ಬೆಳಗ್ಗೆ 8ಕ್ಕೆ ಗೃಹ ಕಚೇರಿ, ಬೆಂದೂರ್‌ವೆಲ್‌ನಲ್ಲಿ ಸಾರ್ವಜನಿಕರ ಭೇಟಿ ಹಾಗೂ ಅಹವಾಲು ಸ್ವೀಕಾರ ಮಾಡುವರು. ಬೆಳಗ್ಗೆ 10ಕ್ಕೆ ಫರಂಗಿಪೇಟೆ ಮೆಸ್ಕಾಂ ಶಾಖಾ ಕಚೇರಿ ಉದ್ಘಾಟನೆ, ಪೂರ್ವಾಹ್ನ 11ಕ್ಕೆ ಮುಡಿಪು ಮೆಸ್ಕಾಂ ಶಾಖಾ ಕಚೇರಿ ಉದ್ಘಾಟನೆ, ಪೂರ್ವಾಹ್ನ 11:30ಕ್ಕೆ ಮುಡಿಪು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಭೆ. ಬಳಿಕ ಇತರೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News