ಕಾರ್ಕಳ ಪುರಸಭೆಗೆ ‘ಕ್ಲೀನ್‌ ಇಂಡಿಯಾ ಜನರಲ್’ ಪ್ರಶಸ್ತಿ

Update: 2016-01-18 18:43 GMT

ಕಾರ್ಕಳ, ಜ.18: ಮಹಾರಾಷ್ಟ್ರದ ಮುಂಬೈ ಘೋರೆಗಾಂವ್ ವರ್ಚುವಲ್ ಇನ್ಪೋ ಸಿಸ್ಟಮ್ಸ್ ಪ್ರೈ.ಲಿ.ನಿಂದ ಕಾರ್ಕಳ ಪುರಸಭೆಗೆ ‘ಕ್ಲೀನ್ ಇಂಡಿಯಾ ಜನರಲ್- 2016’ ಪ್ರಶಸ್ತಿ ಲಭಿಸಿದೆ. ಕಾರ್ಕಳ ಪುರಸಭೆ ಅಧ್ಯಕ್ಷೆ ರೆಹಮತ್ ಎನ್. ಶೇಖ್ ಮತ್ತು ಮುಖ್ಯಾಧಿಕಾರಿ ರಾಯಪ್ಪ ಜ.22ರಂದು ಮುಂಬೈ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಾರ್ಕಳ ಪುರಸಭೆ ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಿಲೇವಾರಿ ವಿಧಾನದ ಬಗ್ಗೆ ಕೈಗೊಂಡ ಕ್ರಮಗಳು ಹಾಗೂ ಯಶಸ್ಸಿನ ಕುರಿತಂತಹ ಸಾಕ್ಷ್ಯಚಿತ್ರವನ್ನು ಮಂಡಿಸಲಾಗಿದ್ದು ಆ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಭಾಜನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News