ಆನ್‌ಲೈನ್ ವಹಿವಾಟಿನ ಮೇಲೆ ಹದ್ದಿನಕಣ್ಣು
Update: 2016-01-19 08:51 IST
ನವದೆಹಲಿ: ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪದಡಿ ಫ್ಲಿಪ್‌ಕಾರ್ಟ್, ಸ್ನಾಪ್‌ಡೀಲ್, ಜಬಾಂಗ್ ಸೇರಿದಂತೆ 21 ಆನ್‌ಲೈನ್ ವಹಿವಾಟು ಸಂಸ್ಥೆಗಳ ಮೇಲೆ ಕಾನೂನು ಜಾರಿ ನಿರ್ದೇಶನಾಲಯ ಹದ್ದಿನಕಣ್ಣು ಇರಿಸಿದೆ.
ಈ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಈಗಾಗಲೇ ವಿದೇಶಿ ಹಣದ ಹರಿವಿಗೆ ಬಗ್ಗೆ ನಿಗಾ ಇಟ್ಟಿದ್ದು, ಅಂಥ ಎಂಟು ಸಂಸ್ಥೆಗಳ ಮೇಲೆ ಅನುಮಾನ ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.