ಆರ್‌ಬಿಐಗೆ ವಿದೇಶಿ ಪ್ರತಿಭೆ ನೇಮಕಕ್ಕೆ ಚಿಂತನೆ
Update: 2016-01-19 08:58 IST
ನವದೆಹಲಿ: ಭಾರತೀಯ ರಿಸರ್ವ್‌ಬ್ಯಾಂಕಿನ ಕೆಲ ಹುದ್ದೆಗಳಿಗೆ ವಿದೇಶಗಳಿಂದ ಹೊಸ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುವ ಯೋಜನೆಯನ್ನು ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಹೊಂದಿದ್ದಾರೆ. 80 ವರ್ಷ ಹಳೆಯ ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲದ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು, "ಕ್ರಿಯಾಶೀಲ ಹಾಗೂ ಬುದ್ಧಿವಂತ" ವ್ಯವಸ್ಥೆಯಾಗಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
2015ರ ಕೊನೆಯ ದಿನ ಸಿಬ್ಬಂದಿಗೆ ಪತ್ರ ಬರೆದಿರುವ ಅವರು, "ಸಾಧ್ಯವಾದಷ್ಟೂ ದೇಶೀಯ ಪ್ರತಿಭೆಗಳಿಗೆ ಅವಕಾಶ ನೂಡುತ್ತೇವೆ. ಆದರೆ ಕೆಲ ಕ್ಷೇತ್ರಗಳಲ್ಲಿ ಪರ್ಯಾಯ ಪ್ರವೇಶವನ್ನೂ ನಾವು ಯೋಚಿಸಬೇಕಾಗುತ್ತದೆ. ಇಲ್ಲಿ ಕೂಡಾ ಹುದ್ದೆಗಳಿಗೆ ಸ್ಪರ್ಧೆಗೆ ಸ್ಥಳೀಯರಿಗೂ ಅವಕಾಶವಿದೆ" ಎಂದು ಹೇಳಿದ್ದಾರೆ.