×
Ad

ಕಾಸರಗೋಡು ನಿವಾಸಿ ಮುಂಬೈ ಯಲ್ಲಿ ನಾಪತ್ತೆ

Update: 2016-01-19 09:33 IST

ಕಾಸರಗೋಡು :  ಕಾಸರಗೋಡು ನಿವಾಸಿಯೋರ್ವರು ಮುಂಬೈ ಯಲ್ಲಿ  ನಾಪತ್ತೆಯಾಗಿರುವುದಾಗಿ   ವಿದ್ಯಾನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
ಚೆಂಗಳ ನಾಲ್ಕನೇ ಮೈಲ್ ನ   ಮುಹಮ್ಮದ್ ಕುನ್ಚಿ  (6೦) ನಾಪತ್ತೆಯಾದವರು ಎಂದು ಗುರುತಿಸಲಾಗಿದೆ.

ನಾಲ್ಕು ದಿನಗಳ ಹಿಂದೆ  ಬಾಂದ್ರಾ ದಿಂದ  ನಾಪತ್ತೆ ಯಾಗಿದ್ದು , ಇಲ್ಲಿ ಆಟಿಕೆ ಸಾಮಾಗ್ರಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ .
ಕೆಲ ವರ್ಷಗಳ ಕಾಲ  ಗಲ್ಫ್ ನಲ್ಲಿದ್ದರು.  ಇವರು ಬಳಸುತ್ತಿದ್ದ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಈ ಬಗ್ಗೆ ಅವರ ಪುತ್ರ  ಖಾದರ್ ಕರಿಪ್ಪೊಡಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News