ಮಂಗಳೂರು: ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭ
ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸ್ ಹಾಗೂ ರೋಟರಿ ಕ್ಲಬ್ ಸುರತ್ಕಲ್ ಇವುಗಳ ಸಹಯೋಗದಲ್ಲಿ ರಸ್ತೆ ಸುರಕ್ಷತೆ- ಅಪಘಾತ ತಡೆಗೆ ಸಕಾಲ ಎಂಬ ಧ್ಯೇಯ ದೊಂದಿಗೆ ನಡೆದ 27ನೇ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭವು ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಭಾಗದ ಎಸಿಪಿ ಉದಯ ಕುಮಾರ್, ವಿದ್ಯಾರ್ಥಿ ಜೀವನದಲದಲ್ಲಿಯೇ ಸಂಚಾರಿ ನಿಯಮಗಳನ್ನು ಅರಿತು ಕಾರ್ಯರೂಪಕ್ಕೆ ತಂದರೆ ಮುಂದಿನ ದಿನಗಳಲ್ಲಿ ಅಪಘಾತ ರಹಿತ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸ್ ಇಲಾಖೆ ವಿಧ್ಯಾರ್ಥಿಗಳನ್ನು ಮುಟ್ಟುವ ಬಗ್ಗೆ ಚಿಂತಿಸಿ ಕಾರ್ಯರೂಪಿಸಲಾಗಿದೆ ಎಂದರು.
ಮಕ್ಕಳು ರಸ್ತೆ ಸುರಕ್ಷತೆಯ ಬಗ್ಗೆ ಅರಿತು ತನ್ನ ಮನೆ, ಹೆತ್ತವರು, ನೆರೆಹೊರೆಯವರ ಗಮನ ಸೆಳೆಯಬೇಕು. ಹೆತ್ತವರು ಸಂಚಾರಿ ನಿಯಮ ಮೀರುವ ಹೆತ್ತವರಿಗೆ ಸಂಚಾರಿ ನಿಯಮಗಳನ್ನು ಮನಮುಟ್ಟುವಂತೆ ತಿಳಿಹೇಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಮುರಳೀದರ ರಾವ್, ಅಪಘಾತಗಳು ನಡೆದರೆ ನೋಡಿಯೂ ನೋಡದಂತೆ ತೆರಳದೆ ನಮ್ಮವರು ಎಂಬ ಭಾವನೆಯೊಂದಿಗೆ ಅಪಘಾತಗೊಂಡವರನ್ನು ಸಂತೈಸಬೇಕು ಎಂದರು.
ಇದೇ ವೇಳೆ ಮೂರು ವಿಭಾಗಳಲ್ಲಿ ಸುಮಾರು 65 ಶಾಲೆಗಳ ಹತ್ತು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ವಿಚಾರರದಲ್ಲಿ ನಡಸಲಾದ ವಿವಿಧ ಸ್ಫರ್ಧೆ ಗಳ ವಿಜೇತರಾದ 500 ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ, ಅಪಘಾತದ ವೇಳೆ ದಾವಿಸಿ ಸ್ವಯಂ ಸಹಾಯ ಹಸ್ತ ಚಾಚುವ ಮಹನಿಯರಾದ ನಾರಾಯಣ ಕರ್ಕೇರ ಸಸಿಹಿತ್ಲು, ಸತೀಶ್ ಆಚಾರ್ಯ ಹಳೆಯಂಗಡಿ, ಬಶೀರ್ ಹಳೆಯಂಗಡಿ, ದೀಪಕ್ ಕುಳಾಯಿ, ಸುನಿಲ್ ಕುಳಾಯಿ, ಭೀಮಾ ಶಂಕರ್ ಕೆ.ಎಸ್. ರಾವ್ ನಗರ ಮುಲ್ಕಿ, ಉಮೇಶ್ ಇಡ್ಯಾ, ಭಾಸ್ಕರ ಕೋಟ್ಯಾನ್ ಕಿನ್ನಿಗೋಳಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭ ನಿಷ್ಠಾವಂತ ಅಧಿಕಾರಿ ಉತ್ತರ ವಲಯ ಸಂಚಾರಿ ವಿಭಾಗದ ವೃತ್ತ ನಿರೀಕ್ಷಕ ಮಂಜುನಾಥ್ ಅವರನ್ನು ರೋಟರಿ ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೆ, ವಿಧ್ಯಾರ್ಥಿನಿಯರಾದ ಅಮೃತ ವರ್ಷ ಮತ್ತು ಬೀಬಿ ಕಝೀನಾ ರಸ್ತೆ ಸುರಕ್ಷತೆಯ ಬಗ್ಗೆ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಕ್ಯಾಡ್ ಸೆಂಟರ್ ನ ಪ್ರೊಪೆಸರ್ ರಾಜೇಶ್, ಇನ್ನರ್ ವೀಲ್ ನ ಅಧ್ಯಕ್ಷೆ ವಿಧ್ಯಾ ಅರವಿಂದ್, ರೋಟರಿ ಕೊ.ಆಡಿನೇಟರ್ ಸಚ್ಚಿದಾನಂದ ಉಪಸ್ಥಿತರಿದ್ದರು. ಸುರತ್ಕಲ್ ರೋಟರಿ ಅಧ್ಯಕ್ಷ ರಾಜ್ ಮೋಹನ್ ಸ್ವಾಗತಿಸಿದರು. ಉತ್ತರ ವಲಯ ಸಂಚಾರಿ ವಿಭಾಗದ ವೃತ್ತ ನಿರೀಕ್ಷಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.