ಮೂಡುಬಿದಿರೆ : ಉರಗಗಳ ಬಗ್ಗೆ ಮಾಹಿತಿ ಕಾರ್ಯಕ್ರಮ
Update: 2016-01-19 11:35 IST
ಮೂಡುಬಿದಿರೆ : ಇಲ್ಲಿನ ಬಾಬು ರಾಜೇಂದ್ರ ಪ್ರಾವುಡ ಶಾಲೆಯಲ್ಲಿ ಉರಗಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯ ಕ್ರಮವು ಮಂಗಳವಾರ ನಡೆಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಮನಾಥ ಪ್ಯೆ ಉಧ್ಗಾಟಿಸಿದರು. ಉರಗತಜ್ಜ ಗುರುರಾಜ ಸನಿಲ್ ಉರಗಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಶಾಲಾ ಶಿಕ್ಷಕಿ ತೆರೆಜಾ ಖರ್ಡೋಜಾ , ನಿವ್ರತ ಶಿಕ್ಷಕ ಟಿ.ಎನ್.ಕೆಂಬಾರೆ, ಶಿಕ್ಷಕ ಕಿರಣ್ ಕುಮಾರ್ ಉಪಸ್ಥಿತರಿದ್ದರು. ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ೧೧ ಶಾಲೆಯ ವಿದ್ಯಾರ್ಥಿಗಳು ಈ ಮಾಹಿತಿ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.