ಕಾಸರಗೋಡು : ಜಿವಿಎಚ್‌ಎಸ್ ಶಾಲಾ ವಾರ್ಷಿಕೋತ್ಸವ
ಕಾಸರಗೋಡು: ಕಾಸರಗೋಡು ವೊಕೇಶನಲ್ ಹಯರ್ ಸೆಕಂಡರಿ
ಸ್ಕೂಲ್ ಫೋರ್ ಗರ್ಲ್ಸ್ ನ ನೂತನ ಕಟ್ಟಡವನ್ನು ಮಂಗಳವಾರದಂದು ಕಾಸರಗೋಡು ಶಾಸಕ ಎನ್ ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಕಾಸರಗೋಡು ನಗರಸಭಾ ಅಧ್ಯಕ್ಷೆ ಬೀಫಾತಿಮ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭಾ ಮಾಜಿ ಅಧ್ಯಕ್ಷ ಟಿ. ಇ. ಅಬ್ದುಲ್ಲ, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಎ. ಅಬ್ದುಲ್ ರಹ್ಮಾನ್, ಸ್ಥಾಯೀ ಸಮಿತಿ ಅಧ್ಯಕ್ಷೆ ಮಿಸ್ರಿಯಾ ಹಮೀದ್, ವಾರ್ಡ್ ಕೌನ್ಸಿಲರ್ ಅರುಣ್ ಕುಮಾರ್ ಶೆಟ್ಟಿ, ಕಾಸರಗೋಡು ಡಿಇಒ ವೇಣುಗೋಪಾನ್ ಇ., ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ರಾದ ಅಬ್ದುಲ್ ಖಾದರ್ ಬಂಗರ, ಜಿ. ನಾರಾಯಣನ್, ಮಾಜಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ, ಹಯರ್ ಸೆಕಂಡರಿ ಪ್ರಾಂಶುಪಾಲೆ ಪ್ರಸೀದ ಪಿ. ವಿ., ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ ಕೆ. ಉಪಸ್ಥಿತರಿದ್ದರು. ವಿಎಚ್‌ಎಸ್‌ಇ ಪ್ರಾಂಶುಪಾಲೆ ಬಿನ್ಸಿ ಪಿ. ಎಸ್. ಸ್ವಾಗತಿಸಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ಎಂ. ವಂದಿಸಿದರು. ಕಾಸರಗೋಡು ಡಿವಿಶನ್ ಪಿಡಬ್ಲ್ಯೂಡಿ ಕಟ್ಟಡ ವಿಭಾಗ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ. ಕೆ. ಬಾಭು ವರದಿ ಮಂಡಿಸಿದರು.