×
Ad

ಮೂಡುಬಿದಿರೆ : ಆಳ್ವಾಸ್‌ನಲ್ಲಿ ನ್ಯಾನೋ ತಂತ್ರಜ್ಞಾನ ಕಾರ್ಯಾಗಾರ

Update: 2016-01-19 19:06 IST

ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ನಡೆಯುವ ‘ನ್ಯಾನೋ ತಂತ್ರಜ್ಞಾನ’ದ ಕುರಿತಾದ 2 ದಿನಗಳ ಕಾರ್ಯಾಗಾರವನ್ನು ಮುದ್ದೇನಹಳ್ಳಿ ವಿಐಎಟಿ ನ್ಯಾನೋ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ದಿನೇಶ ರಂಗಪ್ಪ ಸೋಮವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಯಾವುದೇ ಕ್ಷೇತ್ರದಲ್ಲಿ ಸಮರ್ಪಣೆಯಿದ್ದರೆ ನಮಗೆ ಸಂತೃಪ್ತಿ ದೊರೆಯುತ್ತದೆ. ಸಂತೃಪ್ತಿಯಿರುವ ಕರ್ತವ್ಯ ನಿರ್ವಹಿಸಿದರೆ ಸಾಧನೆ ಸಾಧ್ಯವಾಗುತ್ತದೆ. ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯೊಂದಿಗೆ ಮುನ್ನಡೆದರೆ ಸಂತೃಪ್ತಿ, ಸಾಧನೆ ಎರಡೂ ಲಭಿಸುತ್ತದೆ. ನ್ಯಾನೋ ತಂತ್ರಜ್ಞಾನದಲ್ಲಿ ಸಂಶೋಧನೆಗಳಿಗೂ ಸಾಕಷ್ಟು ಅವಕಾಶಗಳಿವೆ ಎಂದರು.

                               

 ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಪಕ ಪ್ರೊ. ಹರೀಶ್ ಕುಂದರ್, ಕಾಲೇಜಿನ ಇಸಿಎಫ್ ವಿಭಾಗದ ಮುಖ್ಯಸ್ಥ ಪ್ರೊ.ರಾಘವೇಂದ್ರ ರಾವ್, ಕಾರ್ಯಾಗಾರದ ಸಂಯೋಜಕ ಪ್ರೊ.ಕೆ.ವಿ ಸುರೇಶ್, ಟೆನ್ಸಲ್ ಆಂಥೋಣಿ ಕಾರ್ಯಕ್ರಮದಲ್ಲಿದ್ದರು.

ಶ್ರುತಿ.ಕೆ. ಕಾರ್ಯಕ್ರಮ ನಿರೂಪಿಸಿದರು.

‘ಅಡ್ವಾನ್ಸ್ ಇಂಡಸ್ಟ್ರಿಯಲ್ ಅಟೋಮೆಶನ್, ನ್ಯಾನೋ ತಂತ್ರಜ್ಞಾನದಲ್ಲಿ ಪ್ರಸ್ತುತ ಬೆಳವಣಿಗೆ, ಸೈಬರ್ ಸೆಕ್ಯೂರಿಟಿ ಹಾಗೂ ಫೋರೆನ್ಸಿಕ್ಸ್ ವಿಷಯದ ಕುರಿತು ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಮಂಡನೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News