×
Ad

ವಿವಾದಗಳ ಇತ್ಯರ್ಥಕ್ಕೆ ಪರಮಾಣು ಒಪ್ಪಂದ ಮಾದರಿ: ರೂಹಾನಿ

Update: 2016-01-19 20:01 IST

ಅಂಕಾರ, ಜ. 19: ಪ್ರಾದೇಶಿಕ ವಿವಾದಗಳನ್ನು ಬಗೆಹರಿಸಲು ಇರಾನ್‌ನ ಪರಮಾಣು ಒಪ್ಪಂದವನ್ನು ಮಾದರಿಯಾಗಿ ಬಳಸಬಹುದು ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ವಿರುದ್ಧ ವಿಧಿಸಲಾಗಿದ್ದ ಅಂತಾರಾಷ್ಟ್ರೀಯ ದಿಗ್ಬಂಧನೆ ತೆರವುಗೊಂಡ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.

ಅದೇ ವೇಳೆ, ಇರಾನ್‌ನ ಬದ್ಧ ವೈರಿ ಸೌದಿ ಅರೇಬಿಯವನ್ನೂ ರೂಹಾನಿ ಟೀಕಿಸಿದರು. ಇರಾನ್‌ನೊಂದಿಗೆ ಸೌದಿ ಅರೇಬಿಯ ಹೊಂದಿರುವ ಸಮಸ್ಯೆಗಳಿಗೆ ಸ್ವತಃ ಆ ದೇಶವೇ ಕಾರಣ ಎಂದು ಹೇಳಿದ ಅವರು, ಸೌದಿ ತನ್ನ ಪ್ರಾದೇಶಿಕ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಮಾರ್ಚ್‌ನಲ್ಲಿ ಆರಂಭಗೊಳ್ಳುವ ಇರಾನ್ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ 5 ಶೇಕಡದಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ರೂಹಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News