ಕಾಸರಗೋಡು:ಮಂಜೇಶ್ವರ ಉಪ ನೋಂದಾವಣಾ ಕಛೇರಿ ಸ್ಥಾಳನ್ತರಿಸಲು ಮಂಜೇಶ್ವರ ತಾಲೂಕು ಅಭಿವ್ರದ್ದಿ ಸಮಿತಿ ಸಭೆ ತೀರ್ಮಾನ
Update: 2016-01-19 20:15 IST
ಕಾಸರಗೋಡು : ಶಿಥಿಲಾವಸ್ಥೆಗೆ ತಲುಪಿರುವ ಮಂಜೇಶ್ವರ ಉಪ ನೋಂದಾವಣಾ ಕಛೇರಿಯನ್ನು ತಾತ್ಕಾಲಿಕವಾಗಿ ಇನ್ನೊಂದು ಕಟ್ಟಡಕ್ಕೆ ಸ್ಥಾಳನ್ತರಿಸಲು ಮಂಜೇಶ್ವರ ತಾಲೂಕು ಅಭಿವ್ರದ್ದಿ ಸಮಿತಿ ಸಭೆ ತೀರ್ಮಾನ ತೆಗೆದುಕೊಂಡಿದೆ.
ಯಾವುದೇ ಸಂದರ್ಭದಲ್ಲಿ ಕುಸಿಯುವ ಭೀತಿ ಎದುರಿಸುತ್ತಿರುವ ಕುಂಬಳೆ ಬಸ್ಸು ನಿಲ್ದಾಣವನ್ನು ಕೆಡವಲು ಸಭೆ ನಿರ್ಧರಿಸಿತು. ತಾಲೂಕು ಕಚೇರಿ ಹಾಗೂ ಇತರ ಕಛೇರಿಗಳು ಕಾರ್ಯಾಚರಿಸುತ್ತಿರುವುದರಿಂದ ಉಪ್ಪಳದಲ್ಲಿ ಜನದಟ್ಟನೆ ಹೆಚ್ಚುತ್ತಿದ್ದು , ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಅಳವಡಿಸುವಂತೆ ಒತ್ತಾಯಿಸಿದ್ದರೂ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಜಿಲ್ಲಾ ಅಭಿವ್ರದ್ದಿ ಸಮಿತಿ ಸಭೆಯ ಗಮನಕ್ಕೆ ತರಲು ತೀರ್ಮಾನಿಸಿತು.
ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಕೆ .ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಉಪ ತಹಾಶೀಲ್ದಾರ್ ಸುರೇಶ್ ಚಂದ್ರ ಬೋಸ್, ಎಂ. ಕೆ ಪರಮೇಶ್ವರನ್ ಪೋತಿ ಮೊದಲಾದವರು ಉಪಸ್ಥಿತರಿದ್ದರು.