×
Ad

ಮಂಗಳೂರು: ಪ್ರವೀಣ್ ತೊಗಾಡಿಯಾಗೆ ಜ.24 ರವರೆಗೆ ನಿಷೇಧ !

Update: 2016-01-19 21:40 IST

ಮಂಗಳೂರು: ಪ್ರವೀಣ್ ತೊಗಾಡಿಯಾಗೆ ಜ.24 ರವರೆಗೆ ನಿಷೇದ

ಮಂಗಳೂರು,ಜ.19: ವಿಶ್ವ ಹಿಂದೂ ಪರಿಷತ್ ಅಂತರಾಷ್ಟೀಯ ಕಾರ್ಯಧ್ಯಕ್ಷ ಪ್ರವೀಣ್ ತೊಗಾಡಿಯಾಗೆ ಜ.24 ರವರೆಗೆ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯೊಳಗೆ ಪ್ರವೇಶಿಸದಂತೆ ಮತ್ತು ಯಾವುದೆ ಸಭೆ , ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಮಂಗಳೂರು ಪೊಲೀಸ್ ಕಮೀಷನರ್ ನಿಷೇದಾಜ್ಞೆ ಹೊರಡಿಸಿದ್ದಾರೆ.

    ಜ.20 ರಂದು ಮಂಗಳೂರು ನಗರದಲ್ಲಿ ಡಾ. ಪ್ರವೀಣ್ ತೊಗಾಡಿಯಾ ಭಾಗವಹಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರವೀಣ್ ತೊಗಾಡಿಯಾ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಲ್ಲಿ ಅವರು ಉದ್ರೇಕಕಾರಿ ಭಾಷಣ ಮಾಡುವ ಪ್ರವೃತ್ತಿಯುಳ್ಳವರಾಗಿದ್ದು, ಇದರಿಂದ ಮಂಗಳೂರು ನಗರದ ಸಾರ್ವಜನಿಕ ಶಾಂತತೆಗೆ ಭಂಗವುಂಟಾಗಬಹುದು ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು ಆಯುಕ್ತರು ಈ ನಿಷೇದಾಜ್ಞೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News