ಶಿರ್ವ: ಬಸ್‌ನಡಿಗೆ ಬಿದ್ದು ಮಗು ಮೃತ್ಯು
ಶಿರ್ವ, ಜ.19: ಬಸ್ಸೊಂದರ ಅಡಿಗೆ ಬಿದ್ದು ಮಗುವೊಂದು ಮೃತಪಟ್ಟ ಘಟನೆ ಇಂದು ಸಂಜೆ 7 ಗಂಟೆ ಸುಮಾರಿಗೆ ಶಿರ್ವ ಜಾಮಿಯಾ ಮಸೀದಿಯ ಎದುರು ನಡೆದಿದೆ.
ಮೈಸೂರಿನ ಫರ್ಹಿನ್ ತಾಜ್ ಎಂಬವರ ನಾಲ್ಕೂವರೆ ವರ್ಷದ ಮಗು ಸಹ್ರೀನ್ ತಾಜ್ ಮೃತ ಮಗು. ಫರ್ಹಿನ್ ತಾಜ್ ಕೆಲ ದಿನಗಳ ಹಿಂದೆ ಶಿರ್ವದಲ್ಲಿರುವ ತನ್ನ ಸಹೋದರ ಖಾದರ್ ಶರೀಫ್ ಎಂಬವರ ಮನೆಗೆ ಬಂದಿದ್ದರು. ಇಂದು ಅವರು ತಮ್ಮ ಇನ್ನೊಬ್ಬರು ಸಂಬಂಧಿಕರ ಮನೆಗೆ ಹೋಗಲು ಮಗುವಿನೊಂದಿಗೆ ಬಸ್ ಕಾಯುತ್ತಿದ್ದರು.
ಆಗ ಬಸ್‌ನ್ನು ನಿಲ್ಲಿಸಿ ವಿಚಾರಿ ಸುತ್ತಿದ್ದಾಗ ಮಗು ತಾಯಿಯ ಕೈ ತಪ್ಪಿಸಿ ಬಸ್‌ನ ಎದುರು ಹೋಗಿತ್ತು. ಚಾಲಕ ನಿರ್ಲಕ್ಷದಿಂದ ಬಸ್ ಚಲಾಯಿಸಿಕೊಂಡು ಹೋದ ಪರಿ ಣಾಮ ಚಕ್ರದಡಿಗೆ ಬಿದ್ದ ಮಗು ಗಂಭೀರವಾಗಿ ಗಾಯ ಗೊಂಡಿತು. ಕೂಡಲೇ ಶಿರ್ವ ಸಮು ದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಸಾಗಿಸಲಾಯಿತು. ಆದರೆ ಮಗು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿತು.
ಅಪಘಾತಕ್ಕೀಡಾದ ಮಗುವನ್ನು ಸ್ಥಳೀಯರು ಕೂಡಲೇ ಶಿರ್ವದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದರೂ ಅಲ್ಲಿ ಚಿಕಿತ್ಸೆ ನೀಡಲು ವೈದ್ಯರೇ ಇರಲಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಯ ವೈದ್ಯರು ಇಲ್ಲದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿ ಇಲ್ಲಿ ಮೂರನೆ ಬಾರಿ ನಡೆಯುತ್ತಿರುವುದು. ಅಪಘಾತದ ಗಾಯಾಳು ಗಳನ್ನು ಕರೆದುಕೊಂಡು ಬರುವಾಗ ಆಸ್ಪತ್ರೆಯಲ್ಲಿ ವೈದ್ಯರೇ ಇರುವುದಿಲ್ಲ. ಇದಕ್ಕಿಂತ ಮೊದಲು ಬೆಳ್ಮಣ್‌ನಲ್ಲಿ ನಡೆದ ಅಪಘಾತದ ಗಾಯಾಳಿಗೆ ಇಲ್ಲಿ ಚಿಕಿತ್ಸೆ ನೀಡಲು ವೈದ್ಯರಿಲ್ಲದೆ ಅವರು ಅಲ್ಲಿಯೇ ಮೃತಪಟ್ಟಿದ್ದರು ಎಂದು ಸ್ಥಳೀಯರು ದೂರಿದರು.
ಪ್ರತಿಭಟನೆ:
ಶಿರ್ವ ಪರಿಸರ ದಲ್ಲಿರುವ ಏಕೈಕ ಆಸ್ಪತ್ರೆಗೆ ಅಗತ್ಯ ವೈದ್ಯರು ಬೇಕಾಗಿದೆ.ದಿನದ 24 ಗಂಟೆಗೆ ವೈದ್ಯ ರು ಆಸ್ಪತ್ರೆ ಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಅದೆಷ್ಟೋ ಜೀವಗಳನ್ನು ಉಳಿಸಬ ಹುದು. ಇಲ್ಲಿನ ವೈದ್ಯರು ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.