ಕ್ರೀಡೆಗೆ 150 ಕೋಟಿ ರೂ.ಮೀಸಲು: ಸಚಿವ ಜೈನ್
ಹಳೆಯಂಗಡಿ, ಜ.19: ರಾಜ್ಯದಲ್ಲಿ ಯುವಜನ ಕ್ರೀಡೆಗಾಗಿ 150 ಕೋಟಿ ರೂ. ಮೀಸಲು ಇರಿಸಿದ ಕಾರಣ ಸಿಂಥೆಟಿಕ್ ಟ್ರ್ಯಾಕ್, ಸುಸಜ್ಜಿತ ಈಜುಕೊಳಗಳು ಹಾಗೂ ವಿವಿಧ ಕ್ರೀಡಾ ಸವಲತ್ತುಗಳನ್ನು ಹೆಚ್ಚಿಸಲು ಸಾಧ್ಯವಾಯಿತು ಎಂದು ರಾಜ್ಯ ಯುವಜನ ಸೇವಾ ಸಚಿವ ಅಭಯಚಂದ್ರ ಜೈನ್ ಹೇಳಿದರು
ರಾಜ್ಯ ಪ್ರಶಸ್ತಿ ವಿಜೇತ ಸಸಿಹಿತ್ಲು ಯುವಕ ಮಂಡಲ ಮತ್ತು ಯುವತಿ ಮಂಡಲ, ಹಳೆವಿದ್ಯಾರ್ಥಿ ಸಂಘ, ಸಸಿಹಿತ್ಲು ಮತ್ತು ಮುಂಬೈ, ನವೋದಯ ಮಹಿಳಾ ಮಂಡಲ ಸಸಿಹಿತ್ಲು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳ ‘ಯುವ ವೈಭವ_ 2016’ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ತಾಪಂ ಅಧ್ಯಕ್ಷೆ ರಜನಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಜಲಜಾ,ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮಾಜಿ ಅಧ್ಯಕ್ಷ ವಸಂತ ಬೆರ್ನಾಡ್, ಜಿಪಂ ಸದಸ್ಯೆ ಆಶಾ ಸುವರ್ಣ, ತಾಪಂ ಸದಸ್ಯೆ ಸಾವಿತ್ರಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಕರ್ಕೇರಾ,ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್, ದೇವಿ ಪ್ರಸಾದ್ ಶೆಟ್ಟಿ, ಹಳೆವಿದ್ಯಾರ್ಥಿಸಂಘದ ಗೌರವಾಧ್ಯಕ್ಷ ಯಶವಂತ ಶ್ರೀಯಾನ್, ಅಧ್ಯಕ್ಷ ನಾಗೇಸ್ ಡಿ. ಬಂಗೇರಾ, ದ.ಕ. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜೀವ ಸಾಲ್ಯಾನ್, ಸಸಿಹಿತ್ಲು ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಕುಮಾರ್, ಯುವತಿ ಮಂಡಲದ ಅಧ್ಯಕ್ಷೆ ಕವಿತಾ,ನವೋದಯ ಮಹಿಳಾ ಮಂಡಲದ ಅಧ್ಯಕ್ಷೆ ಮಾಲತಿ ಡಿ. ಕೋಟ್ಯಾನ್ ಉಪಸ್ಥಿತರಿದ್ದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪಾಂಡುರಂಗ ಗೌಡ ಸ್ವಾಗತಿಸಿದರು. ನರೇಶ್ ಸಸಿಹಿತ್ಲು ಪ್ರಾಸ್ತಾವಿಸಿದರು. ಪ್ರಭಾತ್ ಎಸ್‌ಆರ್, ಅಮಿತಾ ಕುಂದರ್, ಶರ್ಮಿಳಾ ಪ್ರವೀಣ್ ನಿರೂಪಿಸಿದರು. ನಾಗೇಶ್ ಡಿ.ಬಂಗೇರಾ ವಂದಿಸಿದರು.