×
Ad

ತಖ್ವಾ ಇಸ್ಲಾಮಿಕ್ ಸ್ಕೂಲ್ ಪ್ರತಿಭಾ ಸಂಗಮ

Update: 2016-01-19 23:51 IST


 ಮಂಗಳೂರು, ಜ.19: ನಗರದ ಪಂಪ್‌ವೆಲ್‌ನ ಇಸ್ಲಾಮಿಕ್ ಕಲ್ಚರಲ್ ಸೆಂಟರ್ (ರಿ)ನ ಅಧೀನದಲ್ಲಿರುವ ತಖ್ವಾ ಇಸ್ಲಾಮಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಂದ ತಖ್ವಾ ಇಸ್ಲಾಮಿಕ್ ಸ್ಕೂಲ್‌ನ ಪ್ರಾಂಶುಪಾಲ ಹಾಫಿಝ್ ಅಬ್ದುರ್ರಹ್ಮಾನ್ ಸಖಾಫಿಯ ದುಆದೊಂದಿಗೆ ಮೀಲಾದ್ ಪ್ರತಿಭಾ ಸಂಗಮ ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಹಾಜಿ ಅಬ್ದುಲ್ ಅಝೀಝ್ ಹಸನ್ ವಹಿಸಿದ್ದರು. ಸಂಸ್ಥೆಯ ಮುತವಲ್ಲಿ ಹಾಗೂ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಕಾರ್ಯಕ್ರಮ ಉದ್ಘಾಟಿಸಿದರು.ಸಂಸ್ಥೆಯ ಟ್ರಸ್ಟಿ ಪಿ.ಸಿ. ಹಾಶಿರ್, ಸತ್ತಾರ್ ಗುಡ್‌ವಿಲ್, ಹೆಜಮಾಡಿ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಹಾಜಿ, ರಹ್ಮತುಲ್ಲ ಮಟನ್ ಸ್ಟಾಲ್ ಮಾರ್ಕೆಟ್, ಅಬ್ದುಲ್ ಕಲಾಂ ಸಖಾಫಿ, ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ವ್ಯವಸ್ಥಾಪಕ ಹಾಜಿ ಜಿ.ಎಂ. ಹಸನ್ ಕುಂಞಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News